ಕಲಬುರ್ಗಿ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2000 ರುಪಾಯಿ ಮುಖಬೆಲೆಯ 25 ಲಕ್ಷ ರುಪಾಯಿಯನ್ನು ಗುರುವಾರ ಕಲಬುರ್ಗಿ ಹೊರವಲಯದ ನಾಗನಹಳ್ಳಿ ಬಳಿ ಪೊಲೀಸರು ಜಪ್ತಿ ಮಾಡಿದ್ದಾರೆ..ದಾಖಲೆ ಇಲ್ಲದ 25 ಲಕ್ಷ ರುಪಾಯಿ ಸಾಗಿಸುತ್ತಿದ್ದ ರಾಯಚೂರಿನ ವಾಸವಿ ನಗರ ನಿವಾಸಿ ಸೂರಜ್ ಸಿಂಗ್(32) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ..ಕಾರಿನಲ್ಲಿ ಸಾಗಿಸುತ್ತಿದ್ದ ಹಣಕ್ಕೆ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಣವನ್ನು ಜಪ್ತಿ ಮಾಡಿ, ಆರೋಪಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics