ಹಾಸನದ ಸಂತೆಪೇಟೆಯ ಕಸದ ರಾಶಿಯಲ್ಲಿ ಸುಟ್ಟ 500-1000 ನೋಟುಗಳು ಪತ್ತೆ

500-1000 ಮುಖಬೆಲೆಯ ನೋಟುಗಳ ನಿಷೇಧವಾಗಿ ಒಂದು ತಿಂಗಳು ಕಳೆದಿದ್ದು ಇಂದಿಗೂ ಹಲವು ಕಾಳಧನಿಕರು ತಮ್ಮ ಬಳಿಯಿರುವ ಕಪ್ಪುಹಣವನ್ನು ಏನು ಮಾಡಬೇಕೆಂದು...
ನೋಟು
ನೋಟು
Updated on
ಹಾಸನ: 500-1000 ಮುಖಬೆಲೆಯ ನೋಟುಗಳ ನಿಷೇಧವಾಗಿ ಒಂದು ತಿಂಗಳು ಕಳೆದಿದ್ದು ಇಂದಿಗೂ ಹಲವು ಕಾಳಧನಿಕರು ತಮ್ಮ ಬಳಿಯಿರುವ ಕಪ್ಪುಹಣವನ್ನು ಏನು ಮಾಡಬೇಕೆಂದು ತಿಳಿಯದೇ ಸುಡುತ್ತಿದ್ದು ಇದೀಗ ಹಾಸನದಲ್ಲಿ ಇಂತಹ ಒಂದು ಘಟನೆ ನಡೆದಿದೆ. 
ಹಾಸನದ ಸಂತೆಪೇಟೆ ಬೀದಿಯ ಕಸದ ರಾಶಿಯಲ್ಲಿ ಅರ್ಧ ಸುಟ್ಟ 500-1000 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಅರ್ಧಂಬರ್ದ ಸುಟ್ಟ ನೋಟುಗಳನ್ನು ಸ್ಥಳೀಯರು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಎಷ್ಟು ಮೊತ್ತದ ಹಣವನ್ನು ಸುಡಲಾಗಿದೆ ಹಾಗೂ ಈ ಹಣ ಯಾರದು ಎಂಬ ಮಾಹಿತಿ ತಿಳಿದುಬಂದಿಲ್ಲ. 
ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಯಾರು, ಯಾಕಾಗಿ ಇಷ್ಟೊಂದು ಮೊತ್ತದ ಹಣವನ್ನು ಸುಟ್ಟಿದ್ದಾರೆ ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com