ಹಿರಿಯ ಹಾಸ್ಯ ನಟ ದೊಡ್ಡಣ್ಣ ಅಳಿಯ ವೀರೇಂದ್ರ ನಿವಾಸದ ಮೇಲೆ ಐಟಿ ದಾಳಿ

ಹಿರಿಯ ಹಾಸ್ಯ ನಟ ದೊಡ್ಡಣ್ಣ ಅಳಿಯ ಜೆಡಿಎಸ್ ಮುಖಂಡ ಕೆಸಿ ವೀರೇಂದ್ರ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಈ ವೇಳೆ ಬಾತ್...
ಕೆಸಿ ವೀರೇಂದ್ರ
ಕೆಸಿ ವೀರೇಂದ್ರ
Updated on
ಚಿತ್ರದುರ್ಗ/ಬೆಂಗಳೂರು: ಹಿರಿಯ ಹಾಸ್ಯ ನಟ ದೊಡ್ಡಣ್ಣ ಅಳಿಯ ಜೆಡಿಎಸ್ ಮುಖಂಡ ಕೆಸಿ ವೀರೇಂದ್ರ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ಈ ವೇಳೆ ಬಾತ್ ರೂಂನ ಸಿಕ್ರೆಟ್ ಚೇಂಬರ್ ನಲ್ಲಿ 6.6 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. 
ಕಳೆದ ಶುಕ್ರವಾರ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ವೀರೇಂದ್ರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ 2000 ಮುಖಬೆಲೆಯ 5.7 ಕೋಟಿ ರುಪಾಯಿ ಹಾಗೂ 100 ಮತ್ತು 20ರ ಮುಖಬೆಲೆಯ 90 ಲಕ್ಷ ರೂಪಾಯಿ ನಗದು ಹಣ, 28 ಕೆಜಿ ಚಿನ್ನದ ಗಟ್ಟಿ ಹಾಗೂ 4 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ. 
ವೀರೇಂದ್ರ ಅವರು ಗೋವಾದಲ್ಲಿ ಸ್ವಂತದ ಕ್ಯಾಸಿನೋವನ್ನು ಹೊಂದಿದ್ದಾರೆ. ಇನ್ನು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲೂ ಅವರು ಆರೋಪಿಯಾಗಿದ್ದರು. ಐಟಿ ಅಧಿಕಾರಿಗಳು ವೀರೇಂದ್ರ ಅವರಿಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಗೋವಾದ 15 ಜಾಗಗಳಲ್ಲಿ ದಾಳಿ ನಡೆಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com