ಜಾರಿ ನಿರ್ದೇಶನಾಲಯ ಭರ್ಜರಿ ಬೇಟೆ: ಹವಾಲ ದಂಧೆಯ 7 ಏಜೆಂಟರ ಬಂಧನ

ಪ್ರಮುಖ ಬೆಳವಣಿಗೆಯೊಂದರಲ್ಲಿ ಕಪ್ಪುಹಣವನ್ನು ಬಿಳಿಯಾಗಿಸಲು ಕಾಳಧನಿಕರಿಗೆ ನೆರವಾಗುತ್ತಿದ್ದ 7 ಮಂದಿ ದಲ್ಲಾಳಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ ಕಪ್ಪುಹಣವನ್ನು ಬಿಳಿಯಾಗಿಸಲು ಕಾಳಧನಿಕರಿಗೆ ನೆರವಾಗುತ್ತಿದ್ದ 7 ಮಂದಿ ದಲ್ಲಾಳಿಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ನಿನ್ನೆ ತಡರಾತ್ರಿ ಬೆಂಗಳೂರಿನ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕರ್ನಾಟಕ ಸರಕಾರದ ಓರ್ವ ಹಿರಿಯ ಅಧಿಕಾರಿ ಸಂಬಂಧಿಯೂ ಸೇರಿದಂತೆ ಈ ಏಳು ಮಂದಿ ಮಧ್ಯವರ್ತಿಗಳನ್ನು  ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ 93 ಲಕ್ಷ ರು. ಹೊಸ ನೋಟುಗಳನ್ನು ವಶಪಡಿಸಿಕೊಂಡಿದೆ. ಇತ್ತೀಚೆಗೆ ಸ್ನಾನದ ಮನೆಯಲ್ಲಿ ಅಪಾರ ಪ್ರಮಾಣದ ಹಣ ಬಿಚ್ಚಿಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ  ಅಧಿಕಾರಿಗಳು ಅದರ ಮುಂದುವರೆದ ಭಾಗ ಎಂಬಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಒಟ್ಟು ಏಳು ಮಂದಿ ದಲ್ಲಾಳಿಗಳನ್ನು ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ ಒಟ್ಟು 93 ಲಕ್ಷ ನಗದನ್ನು  ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹಣ ಬದಲಿಸಿಕೊಳ್ಳುವ ನೆಪದಲ್ಲಿ ಮಧ್ಯವರ್ತಿಗಳನ್ನು ಸಂರ್ಪಸಿದ ಅಧಿಕಾರಿಗಳು ನಂತರ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರ ಪೈಕಿ ಸರ್ಕಾರಿ ಅಧಿಕಾರಿಯ ಸಂಬಂಧಿ ಸಹ ಸೇರಿದ್ದು, ಈ ಸಂಬಂಧ ಜಾರಿ  ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಮಧ್ಯವರ್ತಿಗಳು ಶೇ.15 ರಿಂದ ಶೇ.35 ರಷ್ಟು ಕಮಿಷನ್ ಪಡೆದು ಹಣ ಬದಲಾಯಿಸಿ ಕೊಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹವಾಲ ಏಜೆಂಟ್ ಕೆ.ಸಿ.ವೀರೇಂದ್ರ ಬಂಧನ
ಇನ್ನು ಇದೇ ವೇಳೆ ಚಳ್ಳಕೆರೆಯ ಹವಾಲ ಏಜೆಂಟ್‌, ಸ್ಥಳೀಯ ಜೆಡಿಎಸ್‌ ಮುಖಂಡ ಕೆ.ಸಿ. ವೀರೇಂದ್ರ ಅವರನ್ನು ಕೂಡ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.  ವೀರೇಂದ್ರ ಅವರ ಮನೆ ಮತ್ತು ಗೋವಾದಲ್ಲಿರುವ ಅವರ ಮಾಲೀಕತ್ವದ  ಕ್ಯಾಸಿನೊ ಸೇರಿದಂತೆ 15ಕ್ಕೂ ಹೆಚ್ಚು ಕಡೆಗಳಲ್ಲಿ ಶನಿವಾರ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ವೀರೇಂದ್ರ ಅವರ ಸ್ನಾನದ ಮನೆಯಿಂದ ರು. 2 ಸಾವಿರ ಮುಖಬೆಲೆಯ ರು. 5.7 ಕೋಟಿ, 28 ಕೆ.ಜಿ ಚಿನ್ನದ  ಬಿಸ್ಕೆಟ್ ಗಳು‌, 4 ಕೆ.ಜಿ ಚಿನ್ನಾಭರಣ, ರು. 100 ಮತ್ತು ರು. 2000 ಮುಖಬೆಲೆಯ ರು.90 ಲಕ್ಷ ನಗದು ವಶಕ್ಕೆ ಪಡೆದಿದ್ದರು.

ವೀರೇಂದ್ರ ಅವರು ತಮ್ಮ ರಹಸ್ಯ ಲಾಕರ್ ಕಾಣದಂತೆ ಅದರ ಮೇಲೆ ಟೈಲ್ಸ್‌ ಅಳವಡಿಸಿದ್ದರು. ಆದರೆ ರಹಸ್ಯ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು ದಾಳಿ ಅಲ್ಲಿದ್ದ ಅಪಾರ ಪ್ರಮಾಣದ ನಗದನ್ನು  ವಶಪಡಿಸಿಕೊಂಡಿದ್ದರು. ವೀರೇಂದ್ರ ಅವರ ಸಹೋದರರಾದ ಕೆ.ಸಿ. ತಿಪ್ಪೇಸ್ವಾಮಿ ಮತ್ತು ಕೆ.ಸಿ. ನಾಗರಾಜ ಅವರ ಮನೆಗಳ ಮೇಲೂ ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.  ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆಗಿರುವ ವೀರೇಂದ್ರ ಅವರು ಇತ್ತೀಚೆಗೆ ಕ್ಯಾಸಿನೊ ಮತ್ತು ಕ್ರಿಕೆಟ್‌ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ಕೆಲ ಬ್ಯಾಂಕ್‌ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಜೊತೆ ಸೇರಿ ವೀರೇಂದ್ರ ಅವರು ಹಳೆ ನೋಟುಗಳನ್ನು ಬದಲಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಟಕ್‌ ಮಹೀಂದ್ರ ಬ್ಯಾಂಕ್‌,  ಐಸಿಐಸಿಐ, ಎಸ್‌ಬಿಐ ಮತ್ತು ಎಸ್‌ಬಿಎಂ ಅಧಿಕಾರಿಗಳ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com