ಮದ್ಯ ಮಾರಾಟಕ್ಕೆ ತಟ್ಟದ ನೋಟು ನಿಷೇಧ ಎಫೆಕ್ಟ್

ನೋಟು ನಿಷೇಧದ ಬಿಸಿ ಮದ್ಯ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ರಾಜ್ಯದಲ್ಲಿ ಮದ್ಯ ಮಾರಾಟ ಎಂದಿನಂತೆ ಸಾಗಿದೆ...
ಮದ್ಯ
ಮದ್ಯ
ಬೆಂಗಳೂರು: ನೋಟು ನಿಷೇಧದ ಬಿಸಿ ಮದ್ಯ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ರಾಜ್ಯದಲ್ಲಿ ಮದ್ಯ ಮಾರಾಟ ಎಂದಿನಂತೆ ಸಾಗಿದೆ. 
ಕರ್ನಾಟಕ ವೈನ್ ಬೋರ್ಡ್, ಅಬಕಾರಿ ಇಲಾಖೆ, ಮೈಸೂರು ಮಾರಾಟದ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಇತರ ಅಧಿಕಾರಿಗಳು ಜಂಟಿ ಸುದ್ದಿಗೋಷ್ಟಿ ನಡೆಸಿ ಮಾಹಿತಿಯನ್ನು ನೀಡಿದ್ದಾರೆ. ನೋಟು ನಿಷೇಧ ಮದ್ಯ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಹೇಳಿವೆ. 
ಮೈಸೂರು ಮಾರಾಟದ ಇಂಟರ್ನ್ಯಾಷನಲ್ ಲಿಮಿಟೆಡ್ ಮುಖ್ಯ ಜನರಲ್ ಮ್ಯಾನೇಜರ್ ಚಂದ್ರಪ್ಪ ಅವರು ಮಾತನಾಡಿ, ಕರ್ನಾಟಕದಾದ್ಯಂತ 396 ಮದ್ಯ ಮಾರಾಟ ಮಳಿಗೆಗಳಿವೆ. ಇದರಲ್ಲಿ ಪ್ರತಿ ತಿಂಗಳು 9 ಕೋಟಿ ಮೌಲ್ಯದ ಮದ್ಯ ಮಾರಾಟವಾಗುತ್ತದೆ. ಈ ತಿಂಗಳು ಸದ್ಯ 8 ಕೋಟಿ ಮಾರಾಟವಾಗಿದ್ದು ಹೊಸ ವರ್ಷಾಚರಣೆಗೆ ಮದ್ಯ ಮಾರಾಟದಲ್ಲಿ ದ್ವಿಗುಣ ಆಗುವ ಸಾಧ್ಯತೆ ಇದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com