

ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಪ್ರವೀಣ್ ಸೂದ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಒಟ್ಟು 48 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ
ಬೆಂಗಳೂರು ನಗರದ ಆಯುಕ್ತರಾಗಿ ಒಂದೂಮುಕ್ಕಾಲು ವರ್ಷ ಪೂರೈಸಿರುವ ಎನ್.ಎಸ್.ಮೇಘರಿಕ್ ಸ್ಥಾನಕ್ಕೆ ಪ್ರವೀಣ್ ಸೂದ್ ಅವರನ್ನು ನೇಮಿಸಲಾಗಿದೆ.
ಎಸಿಬಿ ಎಡಿಜಿಪಿಯಾಗಿ ಎನ್ ಎಸ್ ಮೆಘರಿಕ್ ಅವರನ್ನು ವರ್ಗಾವಣೆ ಮಾಡಲಾಗಿದೆ. 1986ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಸದ್ಯ ಆಡಳಿತ ವಿಭಾಗ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.