ಕ.ಸಾ.ಪ. ಚುನಾವಣೆ: ಭಾನುವಾರ ಮತದಾನ

ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಸ್ಥಾನದ ವಿವಿಧ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಲಿದ್ದು, ಅಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಗಡಿನಾಡ ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ...
ಕನ್ನಡ ಸಾಹಿತ್ಯ ಪರಿಷತ್ (ಸಂಗ್ರಹ ಚಿತ್ರ)
ಕನ್ನಡ ಸಾಹಿತ್ಯ ಪರಿಷತ್ (ಸಂಗ್ರಹ ಚಿತ್ರ)

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಸ್ಥಾನದ ವಿವಿಧ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಲಿದ್ದು, ಅಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಗಡಿನಾಡ ಘಟಕಗಳ  ಅಧ್ಯಕ್ಷರ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ.

ನಗರದ ನ್ಯಾಷನಲ್ ಕಾಲೇಜು ಮೈದಾನದ ಆವರಣದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಒಂದು ಕೇಂದ್ರಾಧ್ಯಕ್ಷ ಸ್ಥಾನ, ಉಡುಪಿಯ  ನೀಲಾವರ ಸುರೇಂದ್ರ, ದಕ್ಷಿಣ ಕನ್ನಡದ ಪ್ರದೀಪ ಕಲ್ಕೂರ ಅವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ 28 ಜಿಲ್ಲಾಧ್ಯಕ್ಷರ ಸ್ಥಾನಗಳು ಹಾಗೂ 1 ಗಡಿನಾಡು ಘಟಕ  ಸ್ಥಾನಕ್ಕೆ ನಾಳೆ ಮತದಾನ ನಡೆಯಲಿದೆ.

ಒಟ್ಟು 1 ಲಕ್ಷದ 82 ಸಾವಿರ ಮತದಾರರು ಮತ ಚಲಾಯಿಸಲಿದ್ದು,  ಚುನಾವಣೆ ಸುಸೂತ್ರವಾಗಿ ನಡೆಯಲು 292 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಮನುಬಳಿಗಾರ್, ಪ್ರೊ.ಜಯ ಪ್ರಕಾಶ್‌  ಗೌಡ, ಡಾ. ಹೆಚ್.ಎಲ್. ಜನಾರ್ಧನ್, ಬಿ.ಎಂ. ಪಟೇಲ್‌ ಪಾಂಡು, ಸಂಗಮೇಶ್ ಬಾದವಾಡಗಿ, ಆರ್.ಎಸ್.ಎನ್. ಗೌಡ ಸೇರಿದಂತೆ ಒಟ್ಟು 14 ಮಂದಿ ಕೇಂದ್ರಾಧ್ಯಕ್ಷ ಸ್ಥಾನ ಬಯಸಿ ಚುನಾವಣಾ  ಕಣದಲ್ಲಿ ಸೆಣಸಿದ್ದಾರೆ.

ನಗರ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 13 ಮಂದಿ ಕಣದಲ್ಲಿ ಉಳಿದಿದ್ದಾರೆ. ಮಾಯಣ್ಣ, ನೇಬಾರಾಮಲಿಂಗಾಶೆಟ್ಟಿ, ಎಸ್.ಪಿನಾಕಪಾಣಿ, ಎಂ. ಪ್ರಕಾಶ್‌ಮೂರ್ತಿ ಸೇರಿದಂತೆ 13 ಮಂದಿ  ಕಣದಲ್ಲಿದ್ದಾರೆ. ನಾಳೆ ರಾತ್ರಿ 8 ಗಂಟೆ ನಂತರ ಎಲ್ಲ 28 ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನದ ಮತಗಳ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ. ಕೇಂದ್ರಸ್ಥಾನದ ಅಧ್ಯಕ್ಷರು  ಯಾರಾಗಲಿದ್ದಾರೆ ಎಂಬುದು ಮಾರ್ಚ್ 2 ರಂದು ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com