ಉದ್ಯಮಿ ಗಿಲ್ಬರ್ಟ್ ಕೊರಿಯಾ ಕೊಲೆ: ಎರಡನೇ ಮಗನ ಬಂಧನ

ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದ ಮೇಲೆ ತಂದೆಯನ್ನೇ ಕೊಲೆ ಮಾಡಿದ್ದ ಪುತ್ರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ...
ಬಂಧನ(ಸಂಗ್ರಹ ಚಿತ್ರ)
ಬಂಧನ(ಸಂಗ್ರಹ ಚಿತ್ರ)

ಬೆಂಗಳೂರು: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದ ಮೇಲೆ ತಂದೆಯನ್ನೇ ಕೊಲೆ ಮಾಡಿದ್ದ ಪುತ್ರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 22 ರಾತ್ರಿ ತಂದೆ ಗಿಲ್ಬರ್ಟ್ ಕೊಲಾರಿಯಾ ಮಹಿಳೆಯೊಂದಿಗೆ ಫೋನಿನಲ್ಲಿ ಮಾತನಾಡಿದ್ದ ವೇಳೆ ಮಗ ಜೆನ್ಸನ್ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ನಂತರ ಮೊಬೈಲ್ ಚಾರ್ಜರ್ ವೈರಿನಿಂದ ತಂದೆಯ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿ ತಂದೆಯ ದೇಹದ ಮೇಲೆ ಖಾರದ ಪುಡಿ ಎರಚಿ ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದ.

ದೂರನಲ್ಲಿ ತನ್ನ ತಂದೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದರಿಂದಾಗಿ ಮಹಿಳೆಯ ಸಂಬಂಧಿಕರು ತಮ್ಮ ತಂದೆಯನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ. ತೀವ್ರ ವಿಚಾರಣೆ ನಡೆಸಿದ ಪೊಲೀಸರು ಕೊನೆಗೆ ಮಗನನ್ನೇ ಬಂಧಿಸಿದ್ದಾರೆ. ಮೃತ ಗಿಲ್ಬರ್ಟ್ ಕೊಲಾರಿಯ ಹೆಂಡತಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com