ಕೇವಲ ಮೂರು ದಿನಗಳಲ್ಲಿ 70 ವರ್ಷದ ವೃದ್ಧರೊಬ್ಬರ ಜೀವನ ಬದಲಿಸಿದ 7 ಜನರು!

70 ವರ್ಷದ ವೃದ್ಧರೊಬ್ಬರ ಜೀವನವನ್ನು ಕೇವಲ ಮೂರೇ ದಿನಗಳಲ್ಲಿ 7 ಜನರ ತಂಡವೊಂದು ಬದಲಾವಣೆ ಮಾಡಿ ಮಾನವೀಯ ಮೌಲ್ಯಗಳಿಗೆ ಮಾದರಿಯಾಗಿರುವ ಘಟನೆಗೆ ಬೆಂಗಳೂರಿನಲ್ಲಿ ನಡೆದಿದೆ.
ಕೇವಲ ಮೂರು ದಿನಗಳಲ್ಲಿ 70 ವರ್ಷದ ವೃದ್ಧರೊಬ್ಬರ ಜೀವನ ಬದಲಿಸಿದ 7 ಜನರು!
Updated on: 

ಬೆಂಗಳೂರು: ಫುಟ್ ಪಾತ್ ನಲ್ಲಿ ಸಿಗರೇಟ್, ಕ್ಯಾಂಡಿಯನ್ನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದ 70 ವರ್ಷದ ವೃದ್ಧರೊಬ್ಬರ ಜೀವನವನ್ನು ಕೇವಲ ಮೂರೇ ದಿನಗಳಲ್ಲಿ 7 ಜನರ ತಂಡವೊಂದು ಬದಲಾವಣೆ ಮಾಡಿ ಮಾನವೀಯ ಮೌಲ್ಯಗಳಿಗೆ ಮಾದರಿಯಾಗಿರುವ ಘಟನೆಗೆ ಬೆಂಗಳೂರಿನಲ್ಲಿ ನಡೆದಿದೆ.

ವಿಚಿತ್ರವೆಂದರೆ 70 ವೃದ್ಧರೊಬ್ಬರ ಜೀವನವನ್ನು ಬದಲು ಮಾಡಲು ಕೈ ಜೋಡಿಸಿದ 7 ಜನರಿಗೆ ಪರಸ್ಪರ ಪರಿಚಯವಿರಲಿಲ್ಲ. ಹಾಗಿದ್ದರೂ ಇವರೆಲ್ಲಾ ಒಗ್ಗೂಡಲು ಕಾರಣವಾಗಿದ್ದು, ಮಿಲಾಪ್ ನಲ್ಲಿ ಕಮ್ಯುನಿಟಿ ಎಂಗೇಜ್ ಮೆಮಟ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಆರತಿ ರಾಜನ್ ಎಂಬ ಮಹಿಳೆ ಪ್ರಾರಂಭಿಸಿದ ಆನ್ ಲೈನ್ ಪೇಜ್.  ಆರತಿ ರಾಜನ್ ಕಾರ್ಯನಿರ್ವಹಿಸುವ ಕಚೇರಿ ಬಳಿಯ ಫುಟ್ ಪಾತ್ ನಲ್ಲಿ ರಾಧಾಕೃಷ್ಣನ್ ಎಂಬ 70 ವೃದ್ಧರೊಬ್ಬರು ಸಿಗರೇಟ್, ಕ್ಯಾಂಡಿಯನ್ನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ, ಕಚೇರಿಯ ಬಿಡುವಿನ ಸಮಯದಲ್ಲಿ ಆರತಿ ರಾಜನ್ ತಮ್ಮ ಸಹೋದ್ಯೋಗಿಗಳೊಂದಿಗೆ ಕಾಫಿ ಕುಡಿಯಲು ಪ್ರದಿದಿನ ಅಂಗಡಿಯೊಂದಕ್ಕೆ ಭೇಟಿ ನೀಡುತ್ತಿದ್ದರು. ಈ ವೇಳೆ ರಾಧಾಕೃಷ್ಣನ್ ಅವರ ಅಂಗಡಿಯಿಂದ ಸಿಗರೇಟ್ ಖರೀದಿಸುತ್ತಿದ್ದರು. ಹೀಗೆಯೇ ರಾಧಾಕೃಷ್ಣನ್ ಅವರೊಂದಿಗೆ ಮಾತಿಗಿಳಿದಾಗ, ಅವರಿಗೆ ಸಣ್ಣದೊಂದು ಅಂಗಡಿ ನಡೆಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಅಲ್ಲದೆ ರಾಧಾಕೃಷ್ಣನ್ ಅವರ ಬಳಿ ಕೇವಲ ಒಂದು ಸಣ್ಣ ಡಬ್ಬಿ ಹಾಗೂ ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದು ಮುರಿದ ಛತ್ರಿ ಇರುವುದನ್ನು ಹೊರತುಪಡಿಸಿದರೆ ಬೇರೆ ಆಸ್ತಿ ಇರಲಿಲ್ಲ ಎಂಬುದು ತಿಳಿದುಬಂದಿದೆ.

ಮಳೆ ಬಂದಾಗ ಇರುವ ಒಂದು ಛತ್ರಿಯೂ ಸೋರುವುದರಿಂದ ವ್ಯಾಪಾರ ನಡೆಸುವುದು ಸಹ ಕಷ್ಟವಾಗುತ್ತದೆ, ದಿನದ ವ್ಯಾಪಾರದಲ್ಲಿ 30-40 ರು ಲಾಭ ಪಡೆದು, ಅದರಲ್ಲೇ ಮುಂದಿನ ದಿನದ ವ್ಯಾಪಾರಕ್ಕಾಗಿ  ಬಂಡವಾಳವನ್ನಾಗಿಸಿಕೊಳ್ಳಬೇಕು ಹಾಗೂ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಸಂಕಷ್ಟಗಳನ್ನೆಲ್ಲಾ ರಾಧಾಕೃಷ್ಣನ್ ಆರತಿ ರಾಜನ್ ಗೆ ತಿಳಿಸಿದ್ದಾರೆ.  70 ವರ್ಷದ ವೃದ್ಧರ ಸಂಕಷ್ಟವನ್ನು ಕೇಳಿದ ನಂತರ ಆರತಿ ರಾಜನ್ ರಾಧಾಕೃಷ್ಣನ್  ಅವರಿಗೆ ಸಣ್ಣ ಅಂಗಡಿ ನಡೆಸಲು ಸಹಕಾರಿಯಾಗುವಂತೆ ಆರ್ಥಿಕವಾಗಿ ಸಹಾಯ ಮಾಡಲು ನಿರ್ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಪೇಜ್ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ. ಇದಕ್ಕೆ 7 ಜನರು ಕೈ ಜೋಡಿಸಿದ್ದು, ಆರತಿ ಅವರು ನಿರೀಕ್ಷಿಸಿದ್ದಕ್ಕಿಂತ ಒಂದು ಸಾವಿರ ರೂ ಹೆಚ್ಚು ಹಣ ಕೂಡಿಸಿದ್ದಾರೆ. ಅಂಗಡಿಯನ್ನು ಪ್ರಾರಂಭಿಸಲು ಬಿಬಿಎಂಪಿ ಕಾರ್ಪೊರೇಟರ್ ನಿಂದ ಅನುಮತಿ ಪಡೆಯಬೇಕಿದ್ದು, ವ್ಯಕ್ತಿಯನ್ನು ನೋಡಿದ ನಂತರ ಅನುಮತಿ ನೀಡುವುದಾಗಿ ಕಾರ್ಪೊರೇಟರ್ ಸಹ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com