

ಹುಬ್ಬಳ್ಳಿ: ಬೆಂಗಳೂರು–ಹುಬ್ಬಳ್ಳಿ ನಡುವೆ ಏರ್ ಇಂಡಿಯಾ ವಿಮಾನ ಬುಧವಾರ ಅಧಿಕತವಾಗಿ ಸಂಚಾರ ಆರಂಭಿಸಿದೆ.
ಸಂಜೆ 5.5 ನಿಮಿಷಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಬಂದಿಳಿಯಿತು. ಮತ್ತೆ 6 ಗಂಟೆ 25 ನಿಮಿಷಕ್ಕೆ ವಾಪಸ್ ಬೆಂಗಳೂರಿಗೆ ತೆರಳಿತು.
ಬೆಂಗಳೂರಿನಿಂದ ಸುಮಾರು 39 ಪ್ರಯಾಣಿಕರು ಹುಬ್ಬಳ್ಳಿಗೆ ಬಂದಿಳಿದಿರು. ಈ ವಿಮಾನಕ್ಕೆ ಜಲ ಫಿರಂಗಿಗಳ ಮೂಲಕ ಜಲ ಸಿಂಚನ ಮಾಡಿ ಸ್ವಾಗತ ಕೋರಲಾಯಿತು.
ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್. ಸುಬ್ಬಯ್ಯ, ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೊಹಾನಿ ಮತ್ತಿತರರು ಹಾಜರಿದ್ದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಶಿವಾನಂದ ಬೇನಾಳ ಮಾತನಾಡಿ, ಶೀಘ್ರದಲ್ಲೇ ಪ್ರತಿದಿನ ಬೆಂಗಳೂರು– ಹುಬ್ಬಳ್ಳಿ ನಡುವೆ ಹಾಗೂ ಮುಂಬೈ– ಹುಬ್ಬಳ್ಳಿ ನಡುವೆ ಸಂಚಾರ ಆರಂಭಿಸುವ ಕುರಿತು ಏರ್ ಇಂಡಿಯಾ ಚಿಂತನೆ ನಡೆಸಿದೆ ಎಂದು ಹೇಳಿದರು.