

ಬಳ್ಳಾರಿ: ವಯೋವೃದ್ಧ ಭಿಕ್ಷುಕಿಯೊಬ್ಬರು ಮೃತಪಟ್ಟಿದ್ದು ಆಕೆಯ ಬಳಿ 30 ಸಾವಿರ ರುಪಾಯಿ ಪತ್ತೆಯಾಗಿದೆ.
ಬಳ್ಳಾರಿ ನಗರದ ಮೋಕಾ ರಸ್ತೆಯಲ್ಲಿ ವಾಸವಾಗಿದ್ದ ಭಿಕ್ಷುಕಿ ಕಳೆದ ಐದಾರು ವರ್ಷದಿಂದ ಮೋಕಾ ರಸ್ತೆ ಬದಿ ಪುಟ್ಟ ಟೆಂಟ್ ನಲ್ಲಿ ವಾಸವಾಗಿದ್ದು, ಭಿಕ್ಷೆ ಬೇಡಿ ಜೀವನ ನಡೆ ಸಾಗಿಸುತ್ತಿದ್ದರು.
ಭಾನುವಾರ ಬೆಳಗ್ಗೆ ಸ್ಥಳೀಯರು ಭಿಕ್ಷುಕಿ ಮೃತಪಟ್ಟಿರುವುದನ್ನು ಗಮನಿಸಿದ್ದಾರೆ. ನಂತರ ಟೆಂಟ್ ನಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದಾಗ 30 ಸಾವಿರ ರುಪಾಯಿ ಪತ್ತೆಯಾಗಿದೆ. ಸ್ಥಳೀಯರೇ ಭಿಕ್ಷುಕಿಯ ಅಂತ್ಯಕ್ರಿಯೆ ನೆರವೇರಿಸಿದ್ದು, ಆ ಹಣವನ್ನು ಅನಾಥಾಶ್ರಮಕ್ಕೆ ಅಥವಾ ಯಾವುದಾದರೂ ಕೆಲಸಕ್ಕೆ ಸದ್ಭಳಕೆ ಮಾಡಲು ನಿರ್ಧರಿಸಿದ್ದಾರೆ.
ಭಿಕ್ಷುಕಿ ಯಾರು, ಆಕೆಯ ಹೆಸರ ಮತ್ತಿತ್ತರ ಮಾಹಿತಿ ಯಾರಿಗೂ ತಿಳಿದಿಲ್ಲ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.