ಡೆಡ್ ಲೈನ್ ಮುಗಿದರೂ ಮೆಟ್ರೋ ಕಾಮಗಾರಿ ಮುಗಿಯಲ್ಲ!

ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಸಂಪೂರ್ಣತೆಗೆ ಸಾಕಷ್ಟು ಸಂಕಷ್ಟಗಳು ಎದುರಾಗುತ್ತಿದ್ದು, ಡೆಡ್ ಲೈನ್ ಮುಗಿದರೂ ಮೆಟ್ರೋ ಕಾಮಗಾರಿ ಮುಗಿಯುವ...
ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿಯಲ್ಲಿ ಸುರಂಗ ಕೊರೆಯುತ್ತಿರುವ ಯಂತ್ರ
ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿಯಲ್ಲಿ ಸುರಂಗ ಕೊರೆಯುತ್ತಿರುವ ಯಂತ್ರ

ಬೆಂಗಳೂರು: ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಸಂಪೂರ್ಣತೆಗೆ ಸಾಕಷ್ಟು ಸಂಕಷ್ಟಗಳು ಎದುರಾಗುತ್ತಿದ್ದು, ಡೆಡ್ ಲೈನ್ ಮುಗಿದರೂ ಮೆಟ್ರೋ ಕಾಮಗಾರಿ ಮುಗಿಯುವ ಸಾಧ್ಯತೆಗಳು ಕಾಣುತ್ತಿಲ್ಲ.

ನವೆಂಬರ್ 1 ರಾಜ್ಯೋತ್ಸವ ಮಹೋತ್ಸವಕ್ಕೆ ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಸಂಪೂರ್ಣತೆಯನ್ನು ನಗರ ಜನತೆಗೆ ಉಡುಗೊರೆಯಾಗಿ ನೀಡುತ್ತೇವೆಂಬ ರಾಜ್ಯ ಸರ್ಕಾರದ ಭರವಸೆ, ಭರವಸೆಯಾಗಿಯೇ ಉಳಿಯಲಿದೆ.

ಮೆಟ್ರೋ ಮೊದಲ ಹಂತದ ಕಾಮಗಾರಿ ಕುರಿತಂತೆ ಏ.29ರಂದು ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 1 ರಾಜ್ಯೋತ್ಸವ ದಿಂದ ಮೆಟ್ರೋ ಮೊದಲ ಹಂತದ ಕಾಮಗಾರಿಗಳು ಸಂಪೂರ್ಣವಾಗಿ ಮುಗಿಯಲಿದ್ದು, ಮೊದಲ ಹಂತದ ನಮ್ಮ ಮೆಟ್ರೋವನ್ನು ರಾಜ್ಯ ಸರ್ಕಾರ ಜನತೆಗೆ ಉಡುಗೊರೆಯಾಗಿ ನೀಡಲಿದೆ ಎಂದು ಹೇಳಿದ್ದರು.

ಸರ್ಕಾರ ನೀಡಿರುವ ಗಡಿಯನ್ನು ಮುಟ್ಟಲು ಮೆಟ್ರೋ ಅಧಿಕಾರಿಗಳು ಸಾಕಷ್ಟು ಹರಸಾಹಸ ಪಡುತ್ತಿದ್ದು, ಸುರಂಗ ಕೊರೆಯುವ ಸ್ಥಳಗಲ್ಲಿ ಸಂಕಷ್ಟಗಳು ಎದುರಾಗುತ್ತಿವೆ. ಉತ್ತರ ದಕ್ಷಿಣ ಕಾರಿಡಾರ್‌ನ ದಕ್ಷಿಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷ್ಣ (ಸುರಂಗ ಕೊರೆಯುವ ಯಂತ್ರ) ನಿಧಾನಗತಿಯಲ್ಲಿ ಸಾಗುತ್ತಿದ್ದು, ತನ್ನ ಗುರಿಯಿಂದ 150 ಮೀಟರ್ ದೂರದಲ್ಲಿದೆ. ಸುರಂಗ ಕೊರೆಯುವುದರಿಂದ ಕೃಷ್ಣ ಹೊರಬರಲು ಇನ್ನು ಎರಡೂವರೆ ತಿಂಗಳುಗಳ ಕಾಲ ಸಮಯ ಬೇಕಾಗುತ್ತದೆ.

ಮೊದಲ ಹಂತದ ಮೆಟ್ರೋ 42.3 ಕಿಮೀ ಹೊಂದಿದ್ದು,  ಉತ್ತರ ದಕ್ಷಿಣ ಕಾರಿಡಾರ್ ನಾಗಸಂದ್ರ ದಿಂದ ಪುಟ್ಟೇನಹಳ್ಳಿ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್ ಮೈಸೂರು ರಸ್ತೆ, ಬೈಯಪ್ಪನಹಳ್ಳಿ ಜೊತೆಗೆ ಕೆಂಪೇಗೌಡ ಮೆಟ್ರೋ ನಿಲ್ದಾಣವನ್ನು ಹೊಂದಿದೆ.

ಕೆ.ಆರ್ ಮಾರುಕಟ್ಟೆಯಲ್ಲಿ ಕೃಷ್ಣ ಸುರಂಗ ಕೊರೆಯುವ ಕಾರ್ಯ ಮಾಡುತ್ತಿದ್ದು, ಇನ್ನು 150 ಮೀಟರ್ ಗಳಷ್ಟು ಸುರಂಗ ಕೊಲೆಯ ಬೇಕಿದ್ದು, ಮೆಜೆಸ್ಟಿಕ್ ಮುಟ್ಟಲು ಇನ್ನು 747 ಮೀಟರ್ ಗಳಷ್ಟು ಸುರಂಗ ಕೊರೆಯುವ ಅಗತ್ಯವಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರ್ಯಗಳು ಮುಗಿಯುತ್ತವೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೃಷ್ಣ ಸುರಂಗ ಕೊರೆತ ಯಂತ್ರ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ನವೆಂಬರ್ 1 ರೊಳಗಾಗಿ ಮೆಟ್ರೋ ಮೊದಲ ಹಂತದ ಕಾಮಗಾರಿಗಳು ಮುಗಿಯುವ ಸಾಧ್ಯತೆಗಳಿಲ್. ಈ ಯಂತ್ರ ದಿನಕ್ಕೆ 1.5 ಮೀಟರ್ ಸುರಂಗ ಕೊರೆಯುತ್ತಿದೆ. ಈ ವೇಗವನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ 100 ದಿನಗಳ ಕಾಲ ಸಮಯ ಬೇಕಾಗುತ್ತದೆ ಎಂದು ಯೋಜನೆಯ ಅಧಿಕಾರಿಗಳು ಹೇಳಿದ್ದಾರೆ.

ಗಡಿ ಸಮಯ ಮುಟ್ಟಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮೊದಲ ಹಂತದ ಕಾಮಗಾರಿ ಸವಾಲಾಗಿದ್ದು, ನವೆಂಬರ್ 1 ನಮ್ಮ ಗುರಿಯಾಗಿದೆ. ಇದಕ್ಕಾಗಿ ಎಲ್ಲಾ ರೀತಿಯ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ, ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com