ಬೆಂಗಳೂರು: ಪೂಜೆ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದ ನಗರದ ಇಬ್ಬರು ಜ್ಯೋತಿಷಿಗಳಿಗೆ ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ಕಮಲಾನಗರದಲ್ಲಿ ನಡೆದಿದೆ.
ಜ್ಯೋತಿಷ್ಯ ಕೇಂದ್ರ ನಡೆಸುತ್ತಿದ್ದ ಇಬ್ಬರು ಜ್ಯೋತಿಷಿಗಳು ಮಹಿಳೆಯೊಬ್ಬರನ್ನು ಮಂಚಕ್ಕೆ ಕರೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಕರ್ನಾಕಟ ರಕ್ಷಣಾ ವೇದಿಕೆ ಕಾರ್ಯಕರ್ತರು ಜ್ಯೋತಿಷಿಗಳನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ನಂತರ ಬಸವೇಶ್ವರನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಕಾಮುಕ ಜ್ಯೋತಿಷಿಗಳನ್ನು ಮೋಹನ್ ಮತ್ತು ಪೃಥ್ವಿರಾಜ್ ಎಂದು ಗುರುತಿಸಲಾಗಿದ್ದು, ಕಮಲಾನಗರ ಮುಖ್ಯರಸ್ತೆಯಲ್ಲಿ ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ ನಡೆಸುತ್ತಿದ್ದರು.
ಕಷ್ಟ ಹೇಳಿಕೊಂಡು ಬರುವ ಮಹಿಳೆಯರಿಗೆ ಮೈಗೆ ಅಂಜನಾ ಹಚ್ಚಿದರೆ ದೋಷ ಪರಿಹಾರ ಆಗುತ್ತೆ ಎಂದು ನಂಬಿಸಿ, ತಮ್ಮ ಕಚೇರಿಯಲ್ಲಿರುವ ಕೊಣೆಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು ಎನ್ನಲಾಗಿದೆ.