ಮೊಬೈಲ್ ರೀಚಾರ್ಜ್ ಮಾಡಿಕೊಡದಕ್ಕೆ ಕೊಲೆ ಮಾಡಿದ ಯುವಕ

ಮೊಬೈಲ್ ರೀಚಾರ್ಜ್ ಮಾಡಿಕೊಡಲು ನಿರಾಕರಿಸಿದ ಅಂಗಿಡಿ ಮಾಲೀಕನಿಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ...
ಚಾಕು
ಚಾಕು
Updated on: 

ಬೆಂಗಳೂರು: ಮೊಬೈಲ್ ರೀಚಾರ್ಜ್ ಮಾಡಿಕೊಡಲು ನಿರಾಕರಿಸಿದ ಅಂಗಿಡಿ ಮಾಲೀಕನಿಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಡಿವಾಳದಲ್ಲಿ ನಡೆದಿದೆ.

ಹೊಸೂರು ರಸ್ತೆ ನಿವಾಸಿ 29 ವರ್ಷದ ಮಹಮದ್ ನಾಸೀರ್ ಎಂದು ಗುರುತಿಸಲಾಗಿದೆ. ಅಂಗಡಿ ಬಾಗಿಲು ಮುಚ್ಚಿದ ನಂತರ ಬಂದ ಆರೋಪಿ 21 ವರ್ಷದ ಅಮನ್ ಮೊಬೈಲ್ ರೀಚಾರ್ಜ್ ಮಾಡಿಕೊಡುವಂತೆ ಕೇಳಿದ್ದಾನೆ. ಆದರೆ ಮಹಮದ್ ಅಂಗಡಿ ಮುಚ್ಚಾಗಿದೆ ಬೆಳಗ್ಗೆ ಬರುವಂತೆ ತಿಳಿಸಿದ್ದಾನೆ. ಈಗಲೇ ಮಾಡಿಕೊಡು ಎಂದು ಅಮನ್ ಬಲವಂತ ಮಾಡಿದಾಗ ಇಬ್ಬರ ಮಧ್ಯೆ ಜಗಳ ಶುರುವಾಗಿದೆ.

ಇದರಿಂದ ರೊಚ್ಚಿಗೆದ್ದ ಅಮನ್ ಚಾಕು ತೆಗೆದು ಮಹಮದ್ ನಾಸೀರ್ ಎದೆ, ತೊಡೆ, ತಲೆ, ಕೈ ಕಾಲು ಹೀಗೆ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ. ಕೊಲೆ ಮಾಡಿ ಪರಾರಿಯಾಗಿರುವ ವಿಚಾರ ತಿಳಿದ ಗಸ್ತು ತಿರುಗುತ್ತಿದ್ದ ಪೊಲೀಸರು ಅಮನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.  ತೀವ್ರ ಚೂರಿ ಇರಿತಕ್ಕೆ ಒಳಗಾಗಿದ್ದ ಮೊಹಮದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com