

ರಾಮನಗರ: ದೇವಸ್ಥಾನದ ಹೊಸಲಿನ ಮೇಲೆ ರು.11 ತಪ್ಪು ಕಾಣಿಕೆ ಇಟ್ಟು ಕಳ್ಳತನ ಮಾಡಿರುವ ಘಟನೆಯೊಂದು ಚನ್ನಪಟ್ಟಣ ತಾಲೂಕಿನ ಅರಳಾಪುರದಲ್ಲಿ ಭಾನುವಾರ ನಡೆದಿದೆ.
ಅರಳಾಪುರ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು, ಕಳ್ಳತನ ಮಾಡಿರುವ ಕಳ್ಳರು ದೇವಸ್ಥಾನದ ಹೊಸಲಿನ ಬಳಿ ರು.11 ಇಟ್ಟು ಮೂರ್ತಿ ಮೇಲಿದ್ದ 3 ದೇವರ ತಾಳಿ ಹಾಗೂ ಹುಂಡಿಯನ್ನು ಹೊತ್ತೊಯ್ದಿದ್ದಾರೆಂದು ತಿಳಿದುಬಂದಿದೆ.
ಇದೇ ದೇವಸ್ಥಾನದಲ್ಲಿ ಈ ಹಿಂದೆಯೂ 2 ಬಾರಿ ಕಳ್ಳತನವಾಗಿದ್ದು, ಈ ಬಾರಿಯಾಗಿರುವ ಕಳ್ಳತನವೂ ಅದೇ ಕಳ್ಳರೇ ಮಾಡಿರಬಹುದಂದು ಶಂಕೆಗಳು ವ್ಯಕ್ತವಾಗುತ್ತಿವೆ. ಪ್ರಸ್ತುತ ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.