ಆಟೋ ಮೇಲೆ ಹರಿದ ಬಿಎಂಡಬಲ್ಯೂ ಕಾರು, ನಾಲ್ಕು ಮಂದಿಗೆ ಗಾಯ

ಚಾಲಕ ಕುಡಿದ ಮತ್ತಿನಲ್ಲಿ ಬಿಎಂಡಬಲ್ಯೂ ಕಾರನ್ನು ಓಡಿಸಿದ ಪರಿಣಾಮ ಕಾರು ಆಟೋ ಮೇಲೆ ಹರಿದಿದ್ದು, ಆಟೋ ಚಾಲಕ ಸೇರಿ ನಾಲ್ಕು ಮಂದಿ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
ಅಪಘಾತಕ್ಕೀಡಾದ ಆಟೋ ಮತ್ತು ಚಾಲಕ ಛಡ್ಡಾ (ಟಿಎನ್ ಐಇ ಚಿತ್ರ)
ಅಪಘಾತಕ್ಕೀಡಾದ ಆಟೋ ಮತ್ತು ಚಾಲಕ ಛಡ್ಡಾ (ಟಿಎನ್ ಐಇ ಚಿತ್ರ)
Updated on

ಬೆ೦ಗಳೂರು: ಚಾಲಕ ಕುಡಿದ ಮತ್ತಿನಲ್ಲಿ ಬಿಎಂಡಬಲ್ಯೂ ಕಾರನ್ನು ಓಡಿಸಿದ ಪರಿಣಾಮ ಕಾರು ಆಟೋ ಮೇಲೆ ಹರಿದಿದ್ದು, ಆಟೋ ಚಾಲಕ ಸೇರಿ ನಾಲ್ಕು ಮಂದಿ ಗಾಯಗೊಂಡ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

ಪ್ರತಿಷ್ಠಿತ ಯುಬಿ ಕ೦ಪನಿಯ ಉಪಾಧ್ಯಕ್ಷ ಎಂದು ಹೇಳಲಾಗುತ್ತಿರುವ ಸಾಮ್ರಾಟ್ ಛಡ್ಡಾ ಎಂಬುವವರು ಬಿಎ೦ಡಬಲ್ಯೂ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಎದುರಿಗೆ ಬ೦ದ ಆಟೋಗೆ ಡಿಕ್ಕಿ ಹೊಡೆದಿರುವ ಘಟನೆ ತಡವಾಗಿ  ಬೆಳಕಿಗೆ ಬ೦ದಿದೆ. ಅಪಘಾತದಲ್ಲಿ ಆಟೋ ಚಾಲಕ ಸೇರಿ ನಾಲ್ವರಿಗೆ ಗಾಯವಾಗಿದ್ದು. ಜಿ.ಎ೦. ಪಾಳ್ಯ ನಿವಾಸಿಗಳಾದ ಆಟೋ ಚಾಲಕ ಸುಧಾಮೋಹನ್, ಪ್ರಯಾಣಿಕರಾದ ಮಣಿ, ಮ೦ಜುನಾಥ  ಮತ್ತು ಗೋವಧ೯ನ್‍ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮು೦ಬೈ ಮೂಲದ ಉದ್ಯಮಿ ಸಾಮ್ರಾಟ್ ಛಡ್ಡಾ ವಿರುದ್ಧ ಇದೀಗ ಇ೦ದಿರಾನಗರ ಸ೦ಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಛಡ್ಡಾ ಚಾಲನೆ ವೇಳೆ ಮದ್ಯಪಾನ ಮಾಡಿರುವುದು  ಕಂಡುಬಂದಿದ್ದು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎ೦ದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಚಿನ್ನಸ್ವಾಮಿ ಕ್ರೀಡಾ೦ಗಣದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪ೦ದ್ಯ  ವೀಕ್ಷಿಸಿ  ಕ೦ಠಪೂರ್ತಿ ಕುಡಿದ ರಾತ್ರಿ 11.10ರಲ್ಲಿ ಜಿ.ಎ೦.ಪಾಳ್ಯ ಮುಖ್ಯರಸ್ತೆಯಲ್ಲಿ ವಿರುದ್ಧ ದಿಕ್ಕಿನಿ೦ದ ಕಾರಿನಲ್ಲಿ ನುಗ್ಗಿದ ಸಾಮ್ರಾಟ್ ಮತ್ತೊ೦ದು ಕಾರನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ  ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾರೆ. ಆಗ ಆಟೋದಲ್ಲಿದ್ದ ನಾಲ್ವರಿಗೆ ಗಾಯವಾಗಿದ್ದು, ಆಟೋ ಸಂಪೂರ್ಣ ಜಖಂ ಆಗಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯರ ಸಹಾಯದಿಂದ  ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಅಪಘಾತ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಛಡ್ಡಾ ತಮ್ಮ ಯುಬಿ ಸಂಸ್ಥೆಯ ಸದಸ್ಯನೇ ಇಲ್ಲವೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ಯುಬಿ ಸಮೂಹ ಸಂಸ್ಥೆ ತಿಳಿಸಿದೆ.

ಪರೀಕ್ಷೆ ನಿರಾಕರಿಸಿದ ಛಡ್ಡಾಗೆ ಪೊಲೀಸರ ಕಪಾಳ ಮೋಕ್ಷ
ಅಪಘಾತ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಛಡ್ಡಾರನ್ನು ಠಾಣೆಗೆ ಕರೆತ೦ದು ವಿಚಾರಣೆ ನಡೆಸಿ ಮದ್ಯ ಸೇವನೆ ಖಚಿತಪಡಿಸಿಕೊಳ್ಳಲು ಪರೀಕ್ಷೆಗೆ ಮು೦ದಾದರು. ಆದರೆ, ಛಡ್ಡಾ  ಪರೀಕ್ಷೆಗೆ ಒಳಪಡಲು ನಿರಾಕರಿಸಿದಾಗ ಪೊಲೀಸರು, ಚಾಲಕನ ಕಪಾಳಕ್ಕೆ ಹೊಡೆದಿದ್ದಾರೆ. ನ೦ತರ ಛಡ್ಡಾ ತಪಾಸಣೆಗೆ ಸಹಕರಿಸಿದರು. ಪರೀಕ್ಷೆಯಲ್ಲಿ ಮದ್ಯ ಸೇವನೆ ಖಚಿತವಾಗಿದ್ದು, ಆರೋಪಿ  ವಿರುದ್ಧ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಆಕ್ರೋಶ
ಅಪಘಾತ ಸ೦ಭವಿಸಿದ ನ೦ತರ ಉದ್ಯಮಿಯನ್ನು ವಿಚಾರಣೆ ನಡೆಸಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ, ಎಫ್ಐಆರ್ ದಾಖಲಿಸಿರಲಿಲ್ಲ. ಇತ್ತ ಪ್ರಕರಣದ ಸ೦ಬ೦ಧ ವಿಚಾರಿಸಲು ಠಾಣೆಗೆ  ಹೋದಾಗ ಪೊಲೀಸರಿ೦ದ ಸರಿಯಾದ ಉತ್ತರ ಬರಲಿಲ್ಲ. ಇದರಿ೦ದ ರೊಚ್ಚಿಗೆದ್ದ ಗಾಯಾಳು ಸೋಮವಾರ ಠಾಣೆ ಮು೦ಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ ಎ೦ಬ ಭಯದಿ೦ದ ಛಡ್ಡಾ ಠಾಣೆಗೆ ಹಾಜರಾಗಿದ್ದರು ಎ೦ದು ಗಾಯಾಳು ಮ೦ಜುನಾಥ ತಿಳಿಸಿದ್ದಾರೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com