ಉಮಾ ಕೊಣನಕುಂಟೆಯಲ್ಲಿ ಆಸ್ಪತ್ರೆ ತೆರೆದಿದ್ದರು. ಅವರನ್ನು ಮಧ್ಯಾಹ್ನ ಆಟೋದಲ್ಲಿ ಅಪಹರಿಸಿ ಶ್ರೀರಾಮಪುರದ ಮನೆಯೊಂದರಲ್ಲಿ ಬಂಧನದಲ್ಲಿಡಲಾಯಿತು. ಅಷ್ಟೇ ಅಲ್ಲದೇ, ಉಮಾ ಅವರ ಪುತ್ರ ಪವನ್ ಗೆ ಕರೆ ಮಾಡಿದ ಆರೋಪಿಗಳು, ತಾಯಿಯನ್ನು ಬಿಡುಗಡೆ ಮಾಡಲು ರು.20 ಲಕ್ಷ ನೀಡುವಂತೆ ಬೇಡಿಕೆ ಇಟ್ಟು. ತಮ್ಮ ಖಾತೆಗೆ ಹಣ ಜಮಾ ಮಾಡಿ ಎಂದು ಹೇಳಿದ್ದರು.