

ಮಂಡ್ಯ: ಮನೆಯ ಮುಂದೆ ಯಾವುದೇ ಹಾವು ಬಂದ್ರೂ ಅದನ್ನ ಹಿಡಿದು ಕೊಂದು ಮನೆಯವರಿಗೆ ತೊಂದರೆಯಾಗದಂತೆ ರಕ್ಷಿಸುವ ನಾಯಿಯೊಂದು ಮಂಡ್ಯದಲ್ಲಿದೆ.
ಜಿಲ್ಲೆಯ ಗುತ್ತಲು ರಸ್ತೆಯಲ್ಲಿರುವ ಅರಕೇಶ್ವರ ನಗರದಲ್ಲಿ ವಾಸವಿರುವ ಸಾವಿತ್ರಮ್ಮ ಎಂಬವರ ಮನೆಯಲ್ಲಿ ಈ ನಾಯಿಯಿದೆ. ನಾಯಿಯನ್ನ ಮನೆಯವರೆಲ್ಲ ಚಿನ್ನು ಅಂತ ಕರೀತಾರೆ. ಈ ನಾಯಿ ಈಗಾಗಲೇ ಮನೆಯ ಬಳಿ ಬಂದ ಹನ್ನೆರಡು ಹಾವುಗಳನ್ನ ಕಚ್ಚಿ ಸಾಯಿಸಿದೆಯಂತೆ.
ಇದರಿಂದ ನಾಯಿ ಮನೆಯನ್ನ ಕಳ್ಳಕಾಕರಿಂದ ರಕ್ಷಿಸುವುದರ ಜೊತೆಗೆ ಹಾವುಗಳಿಂದಲು ರಕ್ಷಣೆ ಮಾಡುತ್ತಿದೆ. ನಾಯಿ ಹಾವನ್ನ ಕೊಲ್ಲುವುದನ್ನ ಪಕ್ಕದ ಮನೆಯವರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ದೃಶ್ಯ ವಾಟ್ಸಪ್ ನಲ್ಲಿ ಹರಿದಾಡ್ತಿದೆ