ಈಪಿಎಫ್ಓನಿಂದ ಜಾಗರೂಕತೆ ಜಾಗೃತಿ ಸಪ್ತಾಹ 2016

ನೌಕರರ ಭವಿಷ್ಯನಿಧಿ ಸಂಸ್ಥೆಯು ಅಕ್ಟೋಬರ್ 31, 2016 ರಿಂದ ನವೆಂಬರ್ 5, 2016 ರವರಗೆ ಜಾಗರೂಕತೆ ಜಾಗೃತಿ ಸಪ್ತಾಹ ಏರ್ಪಡಿಸಿದೆ.
ಜಾಗರೂಕತೆ ಜಾಗೃತಿ ಸಪ್ತಾಹ 2016
ಜಾಗರೂಕತೆ ಜಾಗೃತಿ ಸಪ್ತಾಹ 2016
Updated on: 

ಬೆಂಗಳೂರು: ನೌಕರರ ಭವಿಷ್ಯನಿಧಿ ಸಂಸ್ಥೆಯು ಅಕ್ಟೋಬರ್ 31, 2016 ರಿಂದ ನವೆಂಬರ್ 5, 2016 ರವರಗೆ ಜಾಗರೂಕತೆ ಜಾಗೃತಿ ಸಪ್ತಾಹ ಏರ್ಪಡಿಸಿದೆ. ನೌಕರರ ಭವಿಷ್ಯನಿಧಿ ಸಂಸ್ಥೆಯು ತನ್ನೆಲ್ಲಾ ಸೇವೆಗಳು ನ್ಯಾಯಯುತವಾಗಿ, ಪ್ರಾಮಾಣಿಕವಾಗಿ ಮತ್ತು ಸಮಗ್ರವಾಗಿ ಸಂಬಂಧಪಟ್ಟವರಿಗೆ ತಲುಪುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಸಪ್ರಾಹ ಆಯೋಜಿಸಿದೆ. ಇದಕ್ಕಾಗಿ ಸಂಸ್ಥೆಯು ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ವಿಜಿಲೆನ್ಸ್ ಸೆಲ್ ಸ್ಠಾಪಿಸಿದೆ. ಸಾರ್ವಜನಿಕರು ಈಪಿಎಫ್ ಪ್ರಯೋಜನಗಳ ವಿಸ್ತರಣೆ ಮತ್ತು ಪಿಎಫ್ ಗೆ ಸಂಬಂಧಪಟ್ಟ ಯಾವುದೇ ದೂರುಗಳನ್ನು ಇಲ್ಲಿ ಗಮನಕ್ಕೆ ತರಬಹುದು. ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಶ್ರೀ. ಮನೀಶ್ ಅಗ್ನಿಹೋತ್ರಿ, ಆರ್ ಪಿ ಎಫ್ ಸಿ-ಐ, ಭವಿಷ್ಯ ನಿಧಿ ಭವನ, ನಂ.13, ರಾಜಾ ರಾಮ್ ಮೋಹನ್ ರಾಯ್ ರಸ್ತೆ, ಬೆಂಗಳೂರು  - 560025 ಅವರಿಗೆ ಸಲ್ಲಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com