ಪ್ರಣವಾನಂದ ಸ್ವಾಮೀಜಿ
ರಾಜ್ಯ
ಸನ್ಯಾಸತ್ವ ತ್ಯಜಿಸಿ ದಾಂಪತ್ಯಕ್ಕೆ ಕಾಲಿಟ್ಟ ಪ್ರಣವಾನಂದ ಸ್ವಾಮೀಜಿ
ಭವ ಬಂಧಗಳಿಂದ ಮುಕ್ತಿ ಪಡೆಯುವ ಸಲುವಾಗಿ ಸನ್ಯಾಸತ್ವ ಸ್ವೀಕರಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಸ್ವಾಮೀಜಿ ಸನ್ಯಾಸತ್ವ ತ್ಯಜಿಸಿ ಸಂಸಾರಿಯಾಗಿದ್ದಾರೆ.
ಕಲಬುರಗಿ: ಭವ ಬಂಧಗಳಿಂದ ಮುಕ್ತಿ ಪಡೆಯುವ ಸಲುವಾಗಿ ಸನ್ಯಾಸತ್ವ ಸ್ವೀಕರಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಸ್ವಾಮೀಜಿ ಸನ್ಯಾಸತ್ವ ತ್ಯಜಿಸಿ ಸಂಸಾರಿಯಾಗಿದ್ದಾರೆ.
ಪ್ರಣವಾನಂದ ಸ್ವಾಮೀಜಿ ಕೇರಳ ಮೂಲದ ಮೀರಾ ಎಂಬ ಯುವತಿಯನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಲಬುರಗಿಯ ಶರಣಬಸವೇಶ್ವರ ದೇಗುಲದಲ್ಲಿ ಮದುವೆ ಕಾರ್ಯಕ್ರಮ ನೆರವೇರಿದ್ದು, ವಿವಾಹ ಸಮಾರಂಭದಲ್ಲಿ ಹಲವು ಮಠಾಧೀಶರು ಭಾಗಿಯಾಗಿದ್ದರು.
ಪ್ರಣವಾನಂದ ಸ್ವಾಮೀಜಿಗಳು ಕಾವಿ ತೊಟ್ಟೆ ಹಸೆಮಣೆ ಏರಿದ್ದು ಇದೀಗ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.


