ಹಾಸನ: ಶಾಲೆಗೆ ಡ್ರಾಪ್ ನೀಡುವುದಾಗಿ ಹೇಳಿ ಇಬ್ಬರಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

ಶಾಲೆಗೆ ಡ್ರಾಪ್ ಕೊಡುವ ನೆಪ ಹೇಳಿ ಕರೆದುಕೊಂಡು ಹೋಗ ಇಬ್ಬರು ಬೈಕ್ ಸವಾರರು ಅಪ್ರಾಪ್ತೆ ಮೇಲೆ ಅತ್ಯಾಚಾರ ವೆಸಗಿರುವ ಘಟನೆ ಹಾಸನದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಶಾಲೆಗೆ ಡ್ರಾಪ್ ಕೊಡುವ ನೆಪ ಹೇಳಿ ಕರೆದುಕೊಂಡು ಹೋಗ ಇಬ್ಬರು ಬೈಕ್ ಸವಾರರು ಅಪ್ರಾಪ್ತೆ ಮೇಲೆ ಅತ್ಯಾಚಾರ ವೆಸಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆ ದುದ್ಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಕೃತ್ಯ ನಡೆದಿದೆ, 16 ವರ್ಷದ ಬಾಲಕಿ ಮೇಲೆ ಯುವಕ ರಘು ಹಾಗೂ ಆತನ ಸ್ನೇಹಿತ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆಂದು ಹಾಲಕಿ ತಿಳಿಸಿದ್ದಾಳೆ.

ಪ್ರಜ್ಞೆ ತಪ್ಪಿದ್ದ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com