PU ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: NEET, JEE, KCET ಪರೀಕ್ಷೆಗಳಿಗೆ ಸರ್ಕಾರದಿಂದ ಉಚಿತ ತರಬೇತಿ! ಅರ್ಜಿ ಸಲ್ಲಿಸುವುದು ಹೇಗೆ?
ಬೆಂಗಳೂರು: ಕರ್ನಾಟಕ ಸರ್ಕಾರದ 'ಮುಖ್ಯಮಂತ್ರಿಗಳ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ' ಅಡಿಯಲ್ಲಿ ಉನ್ನತ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಇಲಾಖೆಯು ವೃತ್ತಿಪರ ಕೋರ್ಸ್‌ಗಳ (NEET, JEE, KCET) ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗಾಗಿ ಉಚಿತ ಆನ್‌ಲೈನ್ ತರಬೇತಿ ನೀಡುತ್ತಿದ್ದು, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಡಿಜಿಟಲ್ ಕಲಿಕಾ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆ ಕುರಿತ ವರದಿ ಇಲ್ಲಿದೆ:
ತರಬೇತಿ ಲಭ್ಯವಿರುವ ಪರೀಕ್ಷೆಗಳು:
NEET: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ.
JEE (Mains & Advanced): ಐಐಟಿ (IIT), ಎನ್‌ಐಟಿ (NIT) ಮತ್ತು ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳ ಪ್ರವೇಶಕ್ಕಾಗಿ.
KCET: ಕರ್ನಾಟಕದ ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ.
ತರಬೇತಿಯ ಪ್ರಮುಖ ಸೌಲಭ್ಯಗಳು:
ಲೈವ್ ಮತ್ತು ರೆಕಾರ್ಡೆಡ್ ತರಗತಿಗಳು: ಪರಿಣಿತ ಉಪನ್ಯಾಸಕರಿಂದ ಲೈವ್ ಆನ್‌ಲೈನ್ ತರಗತಿಗಳು ಹಾಗೂ ಯಾವುದೇ ಸಮಯದಲ್ಲಿ ವೀಕ್ಷಿಸಬಹುದಾದ ರೆಕಾರ್ಡೆಡ್ ವಿಡಿಯೋ ಪಾಠಗಳು ಲಭ್ಯವಿರುತ್ತವೆ.
ಅಧ್ಯಯನ ಸಾಮಗ್ರಿ ಮತ್ತು ಅಣಕು ಪರೀಕ್ಷೆಗಳು: ಪಠ್ಯಕ್ರಮಕ್ಕೆ ಅನುಗುಣವಾದ ಡಿಜಿಟಲ್ ನೋಟ್ಸ್, ಪ್ರಶ್ನೆ ಕೋಶ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ ಮತ್ತು ನಿಯಮಿತ ಅಣಕು ಪರೀಕ್ಷೆಗಳನ್ನು ಒದಗಿಸಲಾಗುತ್ತದೆ.
ಸಂಶಯ ನಿವಾರಣೆ: ವಿದ್ಯಾರ್ಥಿಗಳ ಪಠ್ಯಕ್ಕೆ ಸಂಬಂಧಿಸಿದ ಸಂದೇಹಗಳನ್ನು ಬಗೆಹರಿಸಲು ವಿಶೇಷ ಮಾರ್ಗದರ್ಶನದ ವ್ಯವಸ್ಥೆ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಈ ಪರೀಕ್ಷೆಗಳಿಗೆ ಆನ್ ಲೈನ್ ನಲ್ಲಿ ಉಚಿತ ತರಬೇತಿ ಪಡೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ನೋಂದಣಿಗಾಗಿ ಸೇವಾ ಒನ್: https://sevasindhu.karnataka.gov.in/Sevasindhu/English ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ, ಅರ್ಜಿ ಸಲ್ಲಿಸುವ ಸಂಬಂಧ ಮಾಹಿತಿಗಾಗಿ ಸೇವಾ ಒನ್ ಸಹಾಯವಾಣಿ: 080-24410574 ಯನ್ನು ಸಂಪರ್ಕಿಸಬಹುದಾಗಿದೆ. (ಸೋಮವಾರ–ಶನಿವಾರ, ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ, ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

