ವೃತ್ತಿ & ಉದ್ಯೋಗ ಅವಕಾಶಗಳು

PUC ಪಾಸಾದ ಮಹಿಳೆಯರಿಗೆ ಗುಡ್‌ನ್ಯೂಸ್: 441 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸರ್ಕಾರ; ಆದರೆ ಈ ಜಿಲ್ಲೆಯಲ್ಲಿ ಮಾತ್ರ..

ಬೀದರ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 441 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

PUC ಪಾಸಾದ ಮಹಿಳೆಯರಿಗೆ ಗುಡ್‌ನ್ಯೂಸ್: 441 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸರ್ಕಾರ; ಆದರೆ ಈ ಜಿಲ್ಲೆಯಲ್ಲಿ ಮಾತ್ರ..
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು — AI Image
Published On :

ಬೀದರ್: ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೀದರ್ ಜಿಲ್ಲೆಯ ವಿವಿಧ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 441 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ಕೇವಲ ವಿದ್ಯಾರ್ಹತೆಯ ಅಂಕಗಳು ಮತ್ತು ಸರ್ಕಾರದ ಮೀಸಲಾತಿ ನಿಯಮಗಳ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಇಲಾಖೆಯ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD).

  • ಹುದ್ದೆಗಳ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ.

  • ಒಟ್ಟು ಖಾಲಿ ಹುದ್ದೆಗಳು: 441 ಹುದ್ದೆಗಳು

    • ಅಂಗನವಾಡಿ ಕಾರ್ಯಕರ್ತೆ: 110 ಹುದ್ದೆಗಳು

    • ಅಂಗನವಾಡಿ ಸಹಾಯಕಿ: 331 ಹುದ್ದೆಗಳು

ಉದ್ಯೋಗದ ಸ್ಥಳ: ಬೀದರ್ ಜಿಲ್ಲೆ, ಕರ್ನಾಟಕ (05 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ 08 ತಾಲೂಕುಗಳು)

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ನವೆಂಬರ್ 11, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 11, 2026

  • ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಹತೆ:

  • ಅಂಗನವಾಡಿ ಕಾರ್ಯಕರ್ತೆ: ಅಭ್ಯರ್ಥಿಗಳು ಕನಿಷ್ಠ ಪಿಯುಸಿ (PUC / 12ನೇ ತರಗತಿ) ತೇರ್ಗಡೆಯಾಗಿರಬೇಕು ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.

  • ಅಂಗನವಾಡಿ ಸಹಾಯಕಿ: ಅಭ್ಯರ್ಥಿಗಳು ಕನಿಷ್ಠ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

  • ವಯೋಮಿತಿ: ಕನಿಷ್ಠ 19 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು (ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ).

  • ಸ್ಥಳೀಯತೆ: ಅರ್ಜಿ ಸಲ್ಲಿಸುವ ಮಹಿಳಾ ಮತ್ತು ತೃತೀಯಲಿಂಗಿ ಮಹಿಳಾ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಅಥವಾ ನಗರ ವಾರ್ಡ್‌ನ ಸ್ಥಳೀಯ ನಿವಾಸಿಯಾಗಿರಬೇಕು.

ತಾಲೂಕುವಾರು ಖಾಲಿ ಹುದ್ದೆಗಳ ವಿವರ:

  • ಬೀದರ: 27 ಕಾರ್ಯಕರ್ತೆಯರು, 103 ಸಹಾಯಕಿಯರು — ಒಟ್ಟು 130

  • ಬಸವಕಲ್ಯಾಣ: 25 ಕಾರ್ಯಕರ್ತೆಯರು, 47 ಸಹಾಯಕಿಯರು — ಒಟ್ಟು 72

  • ಭಾಲ್ಕಿ: 16 ಕಾರ್ಯಕರ್ತೆಯರು, 43 ಸಹಾಯಕಿಯರು — ಒಟ್ಟು 59

  • ಔರಾದ (ಸಂತಪೂರ-ಔ): 27 ಕಾರ್ಯಕರ್ತೆಯರು, 56 ಸಹಾಯಕಿಯರು — ಒಟ್ಟು 83 ಹುಮನಾಬಾದ: 6 ಕಾರ್ಯಕರ್ತೆಯರು, 34 ಸಹಾಯಕಿಯರು — ಒಟ್ಟು 40

  • ಚಿಟಗುಪ್ಪಾ: 3 ಕಾರ್ಯಕರ್ತೆಯರು, 25 ಸಹಾಯಕಿಯರು — ಒಟ್ಟು 28

  • ಕಮಲನಗರ: 5 ಕಾರ್ಯಕರ್ತೆಯರು, 12 ಸಹಾಯಕಿಯರು — ಒಟ್ಟು 17

  • ಹುಲಸೂರ: 1 ಕಾರ್ಯಕರ್ತೆ, 11 ಸಹಾಯಕಿಯರು — ಒಟ್ಟು 12

  • ಒಟ್ಟು (ಬೀದರ್ ಜಿಲ್ಲೆ): 110 ಕಾರ್ಯಕರ್ತೆಯರು, 331 ಸಹಾಯಕಿಯರು, ಒಟ್ಟು 441 ಹುದ್ದೆಗಳು.

ಅರ್ಜಿ ಸಲ್ಲಿಸುವ ವೆಬ್‌ಸೈಟ್:

ಆಸಕ್ತ ಅಭ್ಯರ್ಥಿಗಳು Karnataka Anganwadi Portal ಅಥವಾ ಸೇವಾ ಸಿಂಧು ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಆಯ್ಕೆ ವಿಧಾನ:

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ; ಶೈಕ್ಷಣಿಕ ಅಂಕಗಳ ಮೆರಿಟ್ ಮತ್ತು ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಆಯ್ಕೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.