2ನೇ ಹಂತಕ್ಕೇರಿದ ಉಕ್ಕಿನ ಮೇಲ್ಸೇತುವೆ ವಿರೋಧಿ ಪ್ರತಿಭಟನೆ; ರಾಜಕೀಯ ನಾಯಕರೊಂದಿಗೆ ಸಭೆ

ತೀವ್ರ ವಿವಾದಕ್ಕೆ ಕಾರಣವಾಗಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಕ್ಕಿನ ಮೇಲ್ಸೇತುವೆ ಕಾಮಗಾರಿ ವಿರೋಧಿಸಿ ಬೆಂಗಳೂರಿಗರು ಕೈಗೊಂಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಭಾನುವಾರ ರಾಜಕೀಯ ಮುಖಂಡರೊಂದಿಗೆ ಪ್ರತಿಭಟನಾಕಾರರು ಸಭೆ ನಡೆಸಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಕ್ಕಿನ ಮೇಲ್ಸೇತುವೆ ಕಾಮಗಾರಿ ವಿರೋಧಿಸಿ ಬೆಂಗಳೂರಿಗರು ಕೈಗೊಂಡಿರುವ ಪ್ರತಿಭಟನೆ  ತೀವ್ರ ಸ್ವರೂಪ ಪಡೆದಿದ್ದು, ಭಾನುವಾರ ರಾಜಕೀಯ ಮುಖಂಡರೊಂದಿಗೆ ಪ್ರತಿಭಟನಾಕಾರರು ಸಭೆ ನಡೆಸಲಿದ್ದಾರೆ.

ನಮ್ಮ ಬೆಂಗಳೂರು ಪ್ರತಿಷ್ಠಾನದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಪ್ರತಿಭಟನೆಯ ನಡುವೆಯೇ ಕಾಮಗಾರಿ ನಡೆಸುತ್ತಿರುವ ಸರ್ಕಾರದ ಕ್ರಮಕ್ಕೆ ತೀವ್ರ  ಖಂಡನೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ರಾಜಕೀಯ ಮುಖಂಡರೊಂದಿಗೆ ಇಂದು ಸಂಜೆ ಪ್ರತಿಭಟನಾಕಾರರು ಚರ್ಚೆ ನಡೆಸಲು  ಮುಂದಾಗಿದ್ದಾರೆ. ಸಭೆಯಲ್ಲಿ ಪ್ರತಿಭಟನೆಯ ಸ್ವರೂಪ ಹಾಗೂ ಪ್ರತಿಭಟನೆ ಮುಂದಿನ ನಡೆ ಕುರಿತಂತೆ ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಅಲ್ಲದೆ ಕಾಮಗಾರಿಯಿಂದ ಬೆಂಗಳೂರು ನಗರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಚರ್ಚಿಸಲಾಗುತ್ತಿದೆ. ಒಂದು ವೇಳೆ ಸರ್ಕಾರದ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ,  ಪ್ರತಿಭಟನಾಕಾರರು ಅಪ್ಪಿಕೋ ಚಳುವಳಿಗೂ ಮುಂದಾಗುವುದಾಗಿಯೂ ತಿಳಿಸಿದ್ದಾರೆ. ಇಂದು ಸಂಜೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಎಎಪಿ ಮುಖಂಡರ ಜೊತೆ ಸಂವಾದವನ್ನು  ಹಮ್ಮಿಕೊಳ್ಳಲಾಗಿದೆ. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಈ ಸಂವಾದದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಉಳಿದಂತೆ ಪ್ರಕಾಶ್ ಬೆಳವಾಡಿ  ನೇತೃತ್ವದಲ್ಲಿ ಸಂವಾದ ನಡೆಯಲಿದ್ದು, ಹೋರಾಟದ ರೂಪುರೇಷೆಯನ್ನು ಇದೇ ವೇದಿಕೆಯಲ್ಲಿ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳದವರೆಗೆ ನಿರ್ಮಾಣವಾಗಲಿರುವ ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರ ನಿನ್ನೆ ಅಧಿಕೃತ ಚಾಲನೆ ನೀಡಿತ್ತು. ಬ್ರಿಡ್ಜ್ ನಿರ್ಮಾಣಕ್ಕೆ ಬಿಡಿಎ 95 ಕೋಟಿ ರು.  ಹಣವನ್ನು ಕೂಡ ಬಿಡುಗಡೆ ಮಾಡಿದೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಟೆಂಡರ್ ಪಡೆದಿದ್ದ ಎಲ್ ಅಂಡ್ ಟಿ ಸಂಸ್ಥೆಗೆ ಬಿಡಿಎ ವರ್ಕ್ ಆರ್ಡರ್ ನೀಡಿದ್ದು, ಬಿಡಿಎ ಇಇ ರಮೇಶ್ ಅವರು ನಿನ್ನೆ  ಅಧಿಕೃತವಾಗಿ ಎಲ್ ಅಂಡ್ ಸಂಸ್ಥೆಗೆ ವರ್ಕ್ ಆರ್ಡರ್ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com