ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ದೀಪಾವಳಿ ಹಬ್ಬದ ಸಂಭ್ರಮ-ಸಡಗರವನ್ನು ಇಮ್ಮಡಿಗೊಳಿಸಲು ಸುರಕ್ಷಿತವಾಗಿ ಆಚರಿಸುವುದು ಕೂಡ ಮುಖ್ಯ.
ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವ ಭರಾಟೆಯಲ್ಲಿ ಮಕ್ಕಳು ಕಣ್ಣು, ಕೈ, ಕಾಲಿಗೆ ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯ. ಪಟಾಕಿ ಸಿಡಿಸುವಾಗ ಏನು ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಅಮೋದ್ ನಾಯಕ್ ಹೇಳುತ್ತಾರೆ.
- ಪಟಾಕಿ ಸಿಡಿಸುವಾಗ ಮಕ್ಕಳು ಪಟಾಕಿಯಿಂದ ಕನಿಷ್ಠ ತೋಳಿನಷ್ಟು ದೂರದಲ್ಲಿರಬೇಕು.
- ಪಟಾಕಿ ಹೊಡೆಯುವಾಗ ಸಡಿಲ ಬಟ್ಟೆಗಳನ್ನು ಧರಿಸಬೇಡಿ.
-ರಕ್ಷಕ ಕವಚಗಳನ್ನು ದೇಹಕ್ಕೆ ಧರಿಸಿಕೊಳ್ಳಿ.
-ಬೇಡದ ವಸ್ತುಗಳು ದೇಹಕ್ಕೆ ಬಿದ್ದರೆ ನೀರಿನಿಂದ ತೊಳೆಯಿರಿ.
-ರಕ್ಷಾ ಫಲಕವಾಗಿ ಕಾಂಟಾಕ್ಸ್ಟ್ ಬದಲು ಗ್ಲಾಸುಗಳನ್ನು ಧರಿಸಿ.
-ತುರ್ತು ಸಂದರ್ಭದಲ್ಲಿ ಬೆಂಗಳೂರಿನ ನಾಗರಿಕರು ಅಗರ್ ವಾಲ್ ಆಸ್ಪತ್ರೆಯ ದೂರವಾಣಿ ಸಂಖ್ಯೆ 7760968883, 7760969601ನ್ನು ಸಂಪರ್ಕಿಸಿ.