ದೀಪಾವಳಿ

ಇತಿಹಾಸದಲ್ಲೇ ಮೊದಲ ಬಾರಿ ಬ್ರಿಟಿಷ್ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಣ; ವಿಡಿಯೋ ವೈರಲ್!
ಲೇಬರ್ ಏಷ್ಯನ್ಸ್ ಸೊಸೈಟಿ ಆಯೋಜಿಸಿದ್ದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಂನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಮೊದಲ ಬಾರಿಗೆ ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.

ಕಪ್ಪು ಸೀರೆಯಲ್ಲಿ ಅಭಿಮಾನಿಗಳ ಗಮನ ಸೆಳೆದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ; Video viral
ಕನ್ನಡದ ನಟ ಗಣೇಶ್ ಅವರ ಕುಟುಂಬದಲ್ಲೂ ದೀಪಾವಳಿಯನ್ನು ಆಚರಿಸಲಾಗಿದ್ದು ಗೋಲ್ಡನ್ ಸ್ಟಾರ್ ಪುತ್ರಿ ಚಾರಿತ್ರ್ಯ ಕಪ್ಪು ಸೀರೆ ಉಟ್ಟು ಮಿಂಚಿದ್ದಾರೆ.

ದೀಪಾವಳಿ ಪಟಾಕಿ ಅವಘಡಕ್ಕೆ ಬೆಂಗಳೂರಿನಲ್ಲಿ 200 ಮಂದಿಗೆ ಗಾಯ; ಮೂವರಿಗೆ ಶಸ್ತ್ರಚಿಕಿತ್ಸೆ, ಗರ್ಭಿಣಿಯ ಸ್ಥಿತಿ ಚಿಂತಾಜನಕ..!
ಇವರಲ್ಲಿ 21 ವರ್ಷದ ಗರ್ಭಿಣಿಯೊಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರು ಕುಳಿತಿದ್ದ ಸ್ಥಳದ ಪಕ್ಕದಲ್ಲಿದ್ದ ಪಟಾಕಿ ಪೆಟ್ಟಿಗೆಗೆ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿವೆ.

ಪಟಾಕಿ ಸಿಡಿಸುವ ವಿಚಾರಕ್ಕೆ ಗಲಾಟೆ: ರಾಷ್ಟ್ರಪತಿ ಅಂಗರಕ್ಷಕ ದಳದ ಯೋಧನ ತಲೆಗೆ ಗುಂಡೇಟು; ಸ್ಥಿತಿ ಗಂಭೀರ
ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಪ್ರಕಾರ, ಸೌರಭ್ ತೋಮರ್ ತಮ್ಮ ಸಹೋದರರಾದ ವಿನೀತ್ ಮತ್ತು ಮಿಂಟು ಜೊತೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಗ್ರಾಮದವರಾದ ಧೀರಜ್ ಮತ್ತು ಆತನ ಸಹೋದರ ಮೋನು ಅಲಿಯಾಸ್ ಪ್ರವೀಣ್ ಜೊತೆ ಮಾತಿನ ಚಕಮಕಿ ಆರಂಭವಾಗಿದೆ.

'ರಸ್ತೆ ಮೇಲೆ ಪಟಾಕಿ ಹೊಡಿಬೇಡ' ಎಂದಿದ್ದಕ್ಕೇ ಪೊಲೀಸ್ ಅಧಿಕಾರಿಯನ್ನೇ ಹೊಡೆದು ಕೊಂದ ದುಷ್ಕರ್ಮಿಗಳು, ದೀಪಾವಳಿ ದಿನವೇ 3 ಕೊಲೆ!
ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ.

ಬೆಳಕಿನ ಹಬ್ಬದಲ್ಲಿ ಕತ್ತಲೆ ತಂದ ಪಟಾಕಿ: ರಾಜಧಾನಿಯಲ್ಲಿ ನೂರಕ್ಕೂ ಅಧಿಕ ಮಂದಿಯ ಕಣ್ಣಿಗೆ ಗಾಯ, ಆಸ್ಪತ್ರೆಗೆ ದಾಖಲು..!
ನಾರಾಯಣ ನೇತ್ರಾಲಯದ ರಾಜಾಜಿನಗರ ಕೇಂದ್ರದಲ್ಲಿ 41 ಪ್ರಕರಣಗಳು ವರದಿಯಾಗಿವೆ. ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್‌ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ.
ದೀಪಾವಳಿಯನ್ನು 'ಖುಷಿಯೋಂ ಕಾ ಈದ್' ಎಂದ ಖರ್ಗೆ: 'ಈದ್' ಎಂದರೆ ಹಬ್ಬವಷ್ಟೇ, ಧರ್ಮವಲ್ಲ; ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ದೀಪಾವಳಿ ಶುಭಾಶಯ ಕೋರಿದ್ದ ಮಲ್ಲಿಕಾರ್ಜುನ ಖರ್ಗೆ, ಹಬ್ಬವನ್ನು 'ಖುಷಿಯೋಂ ಕಾ ಈದ್' (ಸಂತೋಷದ ಹಬ್ಬ) ಎಂದು ಬಣ್ಣಿಸಿದ್ದರು. ಜನರು ಪರಸ್ಪರ ಭಿನ್ನಾಭಿಪ್ರಾಯ ಮತ್ತು ತಪ್ಪು ತಿಳಿವಳಿಕೆಗಳನ್ನು ಬದಿಗಿಟ್ಟು, ಶಾಂತಿ ಹಾಗೂ ರಾಷ್ಟ್ರೀಯ ಏಕತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದ್ದರು.

ದೀಪಾವಳಿ ಸಂಜೆ ಎಷ್ಟು ದೀಪ ಬೆಳಗಿಸಬೇಕು? ಪಂಚಮುಖಿ ದೀಪದ ವಿಶೇಷತೆ ಏನು; ದೀಪಕ್ಕೆ ಎಣ್ಣೆ ಉತ್ತಮವೋ ಅಥವಾ ತುಪ್ಪವೊ?
ದೀಪಾವಳಿ ಸಂಧ್ಯಾ ಸಮಯದಲ್ಲಿ ಹೀಗೆಯೇ ದೀಪಗಳನ್ನು ಹಚ್ಚಬೇಕು ಎಂಬ ನಿಯಮವಿಲ್ಲ, ತಾವಿರುವ ಪ್ರದೇಶ, ಕುಟುಂಬ ಆಚಾರ, ಪೂಜಾವಿಧಿ ಇವುಗಳಿಗೆ ಅನುಗುಣವಾಗಿ ದೀಪ ಹಚ್ಚ ಬಹುದು.

ದೀಪಾವಳಿಯಲ್ಲಿ ಅಭ್ಯಂಗಸ್ನಾನ ಏಕೆ ಮಾಡಬೇಕು: 'ಹಳದಿ ನೀರಾಟ'ದ ಹಿನ್ನೆಲೆ ಏನು?
ದೀಪಾವಳಿಯ ಸಂದರ್ಭದಲ್ಲಿ ಕೆಲವು ದೇವಾಲಯಗಳಲ್ಲಿ ನಡೆಸುವ ಮತ್ತೊಂದು ಆಚರಣೆಯಾದ ಹಳದಿಕುಳಿ ಅಥವಾ ಹಳದಿ ನೀರಾಟ್. ದೇವಿ ದೇವಾಲಯಗಳಲ್ಲಿ ಈ ಸಮಾರಂಭವು ಹೆಚ್ಚಾಗಿ ಕಂಡುಬರುತ್ತದೆ.

