ಕಾವೇರಿ ಮೇಲ್ವಿಚಾರಣಾ ಸಮಿತಿ ಮೇಲೆ ನಮಗೆ ನಂಬಿಕೆ ಇದೆ: ಸಚಿವ ಎಂ.ಬಿ. ಪಾಟೀಲ್

ರಾಜ್ಯದ ರೈತರ ಪರಿಸ್ಥಿತಿ ಹಾಗೂ ನೀರಿನ ಅಭಾವದ ಬಗ್ಗೆ ವಿವರಣೆ ನೀಡಲಾಗಿದ್ದು, ಕಾವೇರಿ ಮೇಲ್ವಿಚಾರಣಾ ಸಮಿತಿ ಮೇಲೆ ನಮಗೆ ನಂಬಿಕೆ ಎಂದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ...
ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ (ಸಂಗ್ರಹ ಚಿತ್ರ)
ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ರಾಜ್ಯದ ರೈತರ ಪರಿಸ್ಥಿತಿ ಹಾಗೂ ನೀರಿನ ಅಭಾವದ ಬಗ್ಗೆ ವಿವರಣೆ ನೀಡಲಾಗಿದ್ದು, ಕಾವೇರಿ ಮೇಲ್ವಿಚಾರಣಾ ಸಮಿತಿ ಮೇಲೆ ನಮಗೆ ನಂಬಿಕೆ ಎಂದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ರೈತರ ಕೃಷಿಗೆ ಹಾಗೂ ಕುಡಿಯುವ ನೀರಿಗೇ ರಾಜ್ಯದಲ್ಲಿ ಅಭಾವವುಂಟಾಗಿದ್ದು, 2012 ರಿಂದಲೂ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಕುರಿತಂತೆ ಸುಪ್ರೀಂಗೆ ವಿವರಣೆ ನೀಡಲಾಗಿದೆ. ಈ ಬಗ್ಗೆ ಅಫಿಡವಿಟ್'ನ್ನು ಸಲ್ಲಿಸಲಾಗಿದೆ. ಕಾವೇರಿ ಮೇಲ್ವಿಚಾರಣಾ ಸಮಿತಿ ನ್ಯಾಯ ದೊರಕಿಸುವ ನಂಬಿಕೆಯಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಕಾವೇರಿ ಮೇಲ್ವಿಚಾರಣಾ ಸಮಿತಿಯೊಂದಿಗೆ ಸಭೆಯನ್ನು ನಡೆಸಲಾಗುತ್ತಿದ್ದು, ಮುಖ್ಯ ಕಾರ್ಯದರ್ಶಿ ಹಾಗೂ ನಾನು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಜಲಾಶಯಗಳು ಹಾಗೂ ಇನ್ನಿತರೆ ಸೂಕ್ತ ದಾಖಲೆಗಳು ನಮ್ಮ ಬಳಿಯಿದೆ. ಸಮಿತಿಗೆ ವಿವರವನ್ನು ನೀಡಲಾಗುತ್ತದೆ.

ಕಳೆದ 41 ವರ್ಷಗಳಲ್ಲಿ ಈ ಬಾರಿಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಮಳೆಯ ಅಭಾವದಿಂದಾಗಿ ರಾಜ್ಯದ ಪರಿಸ್ಥಿತಿ ಹಾಳಾಗಿದೆ. ಮುಖ್ಯ ಜಲಾಶಯಗಳಲ್ಲೇ ನೀರಿನ ಮಟ್ಟ ಕಡಿಮೆಯಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸಲಿದ್ದೇವೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com