ಭಾಷೆ ಬೇರೆಯಾದರೂ ಕರ್ನಾಟಕಕ್ಕಾಗಿ ದನಿಗೂಡಿಸಿದ ತಮಿಳಿಗರು!

ಕಾವೇರಿ ನದಿ ನೀರು ಹಂಚಿಕೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ನೆರೆ ರಾಜ್ಯಗಳ ಸಂಬಂಧವನ್ನು ಹಾಳಾಗುವಂತೆ ಮಾಡಿದೆ. ಈಗಲು ಎರಡು ರಾಜ್ಯಗಳ ಮಧ್ಯೆ ಕಾವೇರಿ ಎಂಬ...
ಭಾಷೆ ಬೇರೆಯಾದರೂ ಕರ್ನಾಟಕಕ್ಕಾಗಿ ಧನಿಗೂಡಿಸಿದ ತಮಿಳಿಗರು!
ಭಾಷೆ ಬೇರೆಯಾದರೂ ಕರ್ನಾಟಕಕ್ಕಾಗಿ ಧನಿಗೂಡಿಸಿದ ತಮಿಳಿಗರು!

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ನೆರೆ ರಾಜ್ಯಗಳ ಸಂಬಂಧವನ್ನು ಹಾಳಾಗುವಂತೆ ಮಾಡಿದೆ. ಈಗಲು ಎರಡು ರಾಜ್ಯಗಳ ಮಧ್ಯೆ ಕಾವೇರಿ ಎಂಬ ಶತ್ರುತ್ವ ಬೆಂಕಿ ಹೊಗೆಯಾಡುತ್ತಲೇ ಇದೆ.

ರಾಜ್ಯದಲ್ಲಿಯೇ ನೆಲೆಯೂರಿ ಇಲ್ಲಿನ ರಾಜ್ಯದ ಪರಿಸ್ಥಿತಿ ಹಾಗೂ ಕನ್ನಡಿಗರ ಸಂಕಷ್ಟವನ್ನು ಅರಿತಿರುವ ತಮಿಳಿಗರು ಇದೀಗ ಕರ್ನಾಟಕದ ಹೋರಾಟಕ್ಕೆ ಧನಿ ಗೂಡಿಸಿದ್ದಾರೆ. ನಗರದಲ್ಲಿ ನೆಲೆಯೂರಿರುವ ತಮಿಳಿಗರು ಎರಡು ರಾಜ್ಯಗಳಲ್ಲಿ ಎದುರಾಗಿರುವ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಮೂಲದವರಾಗಿದ್ದು ನಗರದಲ್ಲೇ ಕಳೆದ 15 ವರ್ಷಗಳಿಂದಲೂ ನೆಲೆಯೂರಿರುವ ರಂಜಿತಮ್ಮ (92) ಎರಡು ರಾಜ್ಯಗಳಲ್ಲಿ ಎದುರಾಗಿರುವ ಪರಿಸ್ಥಿತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ನೀರು ಹೆಚ್ಚಾಗಿದ್ದು, ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ ಸರಿ ಎನ್ನಬಹುದಿತ್ತು. ಆದರೆ, ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ನಾವು ಇಂದು ಸಂಕಷ್ಟದಲ್ಲಿದ್ದೇವೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಅಲಿಸ್ ರೆಬೇಕಾ ಎಂಬುವವರು ಮಾತನಾಡಿ, ತಮಿಳುನಾಡಿಗೆ ನೀರು ಬಿಡುವುದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿರುವ ಜನರ ಸಂಕಷ್ಟದ ಕೂಗನ್ನು ಕೇಳಲಿ. ಮುಖ್ಯಮಂತ್ರಿಗಳು ಜನರ ಸಂಕಷ್ಟವನ್ನು ಆಲಿಸುವಲ್ಲಿ ವಿಫಲರಾಗಿದ್ದಾರೆಂದು ಹೇಳಿದ್ದಾರೆ.

ಪುಷ್ಪ ಎಂಬುವವರು ಮಾತನಾಡಿ, ತಮಿಳುನಾಡು ಸರ್ಕಾರ ಕಾವೇರಿ ನೀರನ್ನು ಕೇಳುವ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಕಷ್ಟವನ್ನು ಎದುರಾಗುವಂತೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ಮರುಧು ಎಂಬುವವರು ಮಾತನಾಡಿ, 1991ರಿಂದಲೂ ಕಾವೇರಿ ವಿವಾದ ಎರಡು ರಾಜ್ಯಗಳ ತಲೆದೋರಿದೆ. ಕರ್ನಾಟಕ ರಾಜ್ಯದಲ್ಲಿ ತಮಿಳುನಾಡಿನ ಜನರೂ ಇದ್ದಾರೆ. ಕಾವೇರಿ ವಿಚಾರದಲ್ಲಿ ಇಲ್ಲಿನ ರಾಜ್ಯಕ್ಕೆ ತೊಂದರೆಯಾದರೆ ನಮಗೂ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದಾರೆ.

ಕಾವೇರಿ ವಿವಾದ ಕುರಿತಂತೆ ನಿಯಂತ್ರಣ ತಪ್ಪಿ ಹೋರಾಟಗಳು ನಡೆಯುತ್ತಿದೆ. ನಗರ ಯಾವಾಗಲೂ ಶಾಂತಿಯುತವಾಗಿರಬೇಕು. ಬೆಂಗಳೂರು ನಗರದ ವರ್ಚಸ್ಸು ಹಾಳು ಮಾಡಲು ಗೂಂಡಾಗಳಿಗೆ ಅವಕಾಶ ನೀಡಬಾರದು ಎಂದು ರಾಧಾ ಎಂಬುವವರು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com