ಮೈಸೂರು ಸಮೀಪ ಮತ್ತೊಂದು ಹುಲಿ ಸಾವು

ಹುಣಸೂರು ಅರಣ್ಯ ವಿಭಾಗದ ಆನೆಚೌಕುರು ರೇಂಜ್ ನ ಮುತ್ತುರಾಯನಸ್ವಾಮಿ ದೇವಸ್ಥಾನದ ಬಳಿ ಬುಧವಾರ ಮತ್ತೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮೈಸೂರು: ಹುಣಸೂರು ಅರಣ್ಯ ವಿಭಾಗದ ಆನೆಚೌಕುರು ರೇಂಜ್ ನ ಮುತ್ತುರಾಯನಸ್ವಾಮಿ ದೇವಸ್ಥಾನದ ಬಳಿ ಬುಧವಾರ ಮತ್ತೊಂದು ಹುಲಿಯ ಮೃತದೇಹ ಪತ್ತೆಯಾಗಿದೆ.
7ರಿಂದ 8 ವರ್ಷದ ಹುಲಿ ಒಂದು ರಸ್ಸೆಲ್ ಹಾವು ಮತ್ತೊಂದು ವಿಷಪೂರಿತ ಹಾವು ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯದ ಹುಲಿಕಾಲಬೆಟ್ಟದಲ್ಲಿ ವಯಸ್ಸಿನ ಕಾರಣದಿಂದ ನಿನ್ನೆಯಷ್ಟೇ 12 ವರ್ಷದ ಹುಲಿಯೊಂದು ಮೃತಪಟ್ಟಿತ್ತು. ಎರಡು ದಿನಗಳಲ್ಲಿ ಮತ್ತೊಂದು ಹುಲಿ ಮೃತಪಟ್ಟಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದು ಸಹಜ ಸಾವು. ಆದರೂ ಸಾವಿಗೆ ನಿಜವಾದ ಕಾರಣ ತಿಳಿಯಲು ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಪಸು ಜೈವಿಕ ಸಂಸ್ಥೆಗೆ ಸ್ಯಾಂಪಲ್ ಗಳನ್ನು ರವಾನಿಸಲಾಗಿದೆ ಎಂದು ಹುಣಸೂರು ಅರಣ್ಯ ವಿಭಾಗದ ಡಿಸಿಎಫ್ ಬಾಲಂಚದರ್ ಅವರು ತಿಳಿಸಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆ ವೇಳೆ ಹುಲಿಯ ಹೊಟ್ಟೆಯಲ್ಲಿ ರಸ್ಸೆಲ್ ಹಾವು, ವಿಷಪೂರಿತ ಹಾವು, ಪ್ಯಾಂಗೋಲಿನ ಮೂಳೆಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com