ಬೆಂಗಳೂರು: ರಾಜ್ಯದ ಎಸ್ಕಾಂಗಳ ಬೇಡಿಕೆಗೆ ಮಣಿದಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್ಸಿ) ವಿದ್ಯುತ್ ಪ್ರತಿ ಯೂನಿಟ್ ಮೇಲೆ 48 ಪೈಸೆ ಹೆಚ್ಚಳ ಮಾಡಿದೆ.
ಎಲ್ಲಾ ಎಸ್ಕಾಂಗಳು(ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಕಂಪನಿ) ಪ್ರತಿ ಯೂನಿಟ್ ಮೇಲೆ 1.40 ಪೈಸೆ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಪ್ರಸ್ತಾವನೆಗೆ ಮಣಿದಿರುವ ಕೆಇಆರ್ಸಿ ಇದೀಗ ಪ್ರತಿ ಯೂನಿಟ್ ಮೇಲೆ 48 ಪೈಸೆ ಹೆಚ್ಚಳ ಮಾಡಿದೆ.
ಇನ್ನ ದರ ಹೆಚ್ಚಳ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅಧ್ಯಕ್ಷ ಎಂಕೆ ಶಂಕರಲಿಂಗೇಗೌಡ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳ ಮಾಡಿರುವುದನ್ನು ಸ್ಪಷ್ಟಪಡಿಸಿದ್ದು, ಈ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ ಎಂದರು.
ಕಳೆದ ಬಾರಿ ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್ ಗೆ 30 ಪೈಸೆ, 31ರಿಂದ 100 ಯೂನಿಟ್ ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್ ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು.