ಈ ಸಂಬಂಧ 20 ವರ್ಷದ ಯುವತಿ ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಖಾಸಗಿ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿರುವ ಯುವತಿ ಏಪ್ರಿಲ್ 15 ರಂದು ರಾತ್ರಿ ಸುಮಾರು 10.30 ಕ್ಕೆ ಮೊಬೈಲ್ ರೀಚಾರ್ಜ್ ಮಾಡಿಸಿಕೊಂಡು ವಾಪಸ್ ಬರುವಾಗ, ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೊಬ್ಬ ಯುವತಿಯ ಟೀ ಶರ್ಟ್ ಹಿಡಿದು ಎಳೆದಾಡಿದ್ದಾನೆ. ತಕ್ಷಣವೇ ಆಕೆ ಜೋರಾಗಿ ಕೂಗಿಕೊಂಡಾಗ ಆತ ಅಲ್ಲಿಂದ ಪರಾರಿಯಾದ, ಆಘಾತದಲ್ಲಿದ್ದ ನನಗೆ ಬೈಕ್ ನಂಬರ್ ನೆನಪಿಟ್ಟುಕೊಳ್ಳಲಾಗಲಿಲ್ಲ, ನಾನು ಜೋರಾಗಿ ಕೂಗಿಕೊಂಡ ತಕ್ಷಣ ಪಕ್ಕದ ಗ್ರೌಂಡ್ ನಲ್ಲಿದ್ದ ಇಬ್ಬರು ನನ್ನ ಬಳಿ ಓಡಿ ಬಂದರು. ವೈಟ್ ಹೆಲ್ಮೆಟ್ ಧರಿಸಿದ್ದ ಆತ ಕೂಡಲೇ ಅಲ್ಲಿಂದ ಪರಾರಿಯಾದ ಎಂದು ಆಕೆ ದೂರಿನಲ್ಲಿ ದಾಖಲಿಸಿದ್ದಾಳೆ.