ಬೆಂಗಳೂರು: ಭಾರತದ ಕಲೆ, ಸಂಸ್ಕೃತಿ ಮತ್ತು ಇತಿಹಾಸಗಳ ಬಗ್ಗೆ ಆನ್ ಲೈನ್ ಸಂವಹನ ವೆಬ್ ಘಟಕದ ಅಭಿವೃದ್ಧಿಗೆ ಬೆಂಬಲ ನೀಡಲು ಇನ್ಫೋಸಿಸ್ ಫೌಂಡೇಶನ್ ಸಹಪಿಡಿಯಾ ಜೊತೆ ಕೈಜೋಡಿಸಿದೆ.
ಈ ಸಹಭಾಗಿತ್ವದಡಿ, ಇನ್ಫೋಸಿಸ್ ಫೌಂಡೇಶನ್, ಲೇಖನಗಳು, ಸಂದರ್ಶನಗಳು, ಛಾಯಾಚಿತ್ರಗಳು, ಪ್ರದರ್ಶನ ವಿಡಿಯೋಗಳು ಮತ್ತು ಗ್ರಂಥಸೂಚಿಗಳನ್ನೊಳಗೊಂಡ ಮಲ್ಟಿಮೀಡಿಯಾ ಮಾಡ್ಯೂಲ್ ಗಳನ್ನು ಒದಗಿಸುತ್ತದೆ. ಈ ಮೂಲಕ ಭಾರತದ ಸಂಪದ್ಭರಿತ ಕಲೆ ಮತ್ತು ಇತಿಹಾಸದ ಶ್ರೀಮಂತ ಅನುಭವವನ್ನು ಆನ್ ಲೈನ್ ಓದುಗರಿಗೆ ನೀಡಲಿದೆ.
ಈ ಅಭಿಯಾನಕ್ಕೆ 25 ವರ್ಷಗಳವರೆಗೆ ಇನ್ಫೋಸಿಸ್ ಫೌಂಡೇಶನ್ 2 ಕೋಟಿ ರೂಪಾಯಿ ಅನುದಾನ ನೀಡಲಿದೆ.