ನಗರದ 174 ಪ್ರವಾಹ ಪೀಡಿತ ತಾಣಗಳನ್ನು ಗುರುತಿಸಿದ ಬಿಬಿಎಂಪಿ

ಮುಂಗಾರು ಮಳೆಗೆ ಮುನ್ನ ಸಿದ್ಧತೆ ಮಾಡಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂಗಾರು ಮಳೆಗೆ ಮುನ್ನ ಸಿದ್ಧತೆ ಮಾಡಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಾದ್ಯಂತ 174 ನೆರೆಪೀಡಿತ ಕೇಂದ್ರಗಳನ್ನು ಗುರುತಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ(ಕೆಎಸ್ಎನ್ ಡಿಎಂಸಿ)ಅಧಿಕಾರಿಗಳು ಗುರುತಿಸಿದ ನಂತರ ಈ ಸಂಖ್ಯೆ 200ರಿಂದ 174ಕ್ಕೆ ಇಳಿದಿದ್ದು ಒಳಚರಂಡಿಗಳನ್ನು ಮರು ನಿರ್ಮಾಣ ಮಾಡುವಂತೆ ಅಧಿಕಾರಿಗಳು ಪಾಲಿಕೆಗೆ ಸೂಚಿಸಿದ್ದಾರೆ.
ಕೆಎಸ್ಎನ್ ಡಿಎಂಸಿಯ ಹೈಡ್ರಾಲಜಿ ವಿಭಾಗದ ಯೋಜನಾ ವಿಜ್ಞಾನಿ ಶುಭಾ ಅವಿನಾಶ್ ಅವರ ಪ್ರಕಾರ, ಬೆಂಗಳೂರಿನ 174 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪೂರ್ವ ವಲಯದಲ್ಲಿ ಅತಿ ಹೆಚ್ಚು 48, ದಕ್ಷಿಣದಲ್ಲಿ 30, ಮಹದೇವಪುರ ಮತ್ತು ರಾಜರಾಜೇಶ್ವರಿನಗರದಲ್ಲಿ 25, ಪಶ್ಚಿಮ ವಲಯದಲ್ಲಿ 22, ಬೊಮ್ಮನಹಳ್ಳಿಯಲ್ಲಿ 14 ಮತ್ತು ಯಲಹಂಕ ಹಾಗೂ ದಾಸರಹಳ್ಳಿ ವಲಯದಲ್ಲಿ ತಲಾ 5 ಇವೆ.
ಚರಂಡಿ ನೀರಿನ ಮರು ನಿರ್ಮಾಣಕ್ಕೆ ಕೆಎಸ್ ಎನ್ ಡಿಎಂಸಿ ಬಿಬಿಎಂಪಿಗೆ ಸಲಹೆ ನೀಡಿದೆ.  ಚರಂಡಿಗಳನ್ನು ವಿಸ್ತರಿಸಿ ಆಳಕ್ಕೆ ಇಳಿಸಿ ಜಾರುಗಳನ್ನು ನಿರ್ಮಿಸುವುದಾಗಿದೆ. ಆದರೆ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಸ್ಥಳದ ಕೊರತೆಯಿರುವುದರಿಂದ ಇದನ್ನು ಮಾಡಲು ಸಾಧ್ಯವಿಲ್ಲ. ಹೊರ ವಲಯಗಳಾದ ಬೊಮ್ಮನಹಳ್ಳಿ, ಹುಳಿಮಾವು, ಮಡಿವಾಳ ಮತ್ತು ಇತರ ಪ್ರದೇಶಗಳಲ್ಲಿ ಮಾಡಬಹುದು. ಈ ಪ್ರದೇಶಗಳಲ್ಲಿ ಏಳು ಸ್ಥಳಗಳು ನೆರೆಪೀಡಿತವಾಗಿವೆ ಎಂದು ಶುಭಾ ಅವಿನಾಶ್ ಹೇಳುತ್ತಾರೆ.
ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಶೇಕಡಾ 30ರಷ್ಟು ಮಳೆ ನೀರು ಕೆರೆಗಳಿಗೆ ಹೋಗುತ್ತಿದ್ದವು. ಉಳಿದವು ಭೂಮಿಗೆ ಇಂಗಿ ಹೋಗುತ್ತಿದ್ದವು. ಇಂದು ಶೇಕಡಾ 10ಕ್ಕಿಂತ ಕಡಿಮೆ ಮಳೆ ನೀರು ಕೆರೆಗೆ ಹರಿದು ಹೋಗುತ್ತದೆ. ಶೇಕಡಾ 20ರಷ್ಟು ನೀರು ಚರಂಡಿಗೆ ಮತ್ತು ಉಳಿದವು ರಸ್ತೆ ಮೇಲೆಲ್ಲಾ ತುಂಬುತ್ತವೆ. ಸಿಮೆಂಟ್ ನ ಕಾರಣದಿಂದ ಹೀಗಾಗುತ್ತಿದ್ದು ನೀರನ್ನು ಹೀರಿಕೊಳ್ಳಲು ಜಾಗವಿಲ್ಲದಾಗಿದೆ ಎನ್ನುತ್ತಾರೆ ಶ್ರೀನಿವಾಸ ರೆಡ್ಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com