2014, ಡಿಸೆಂಬರ್ 9ರಂದು ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನ ರಾಜೀವ್ ಗಾಂಧಿ ನಗರದಲ್ಲಿ ಲೋಕೇಶ್ ಎಂಬ ಯುವಕ ಅಪ್ರಾಪ್ತೆಯನ್ನು ದಾರಿಯಲ್ಲಿ ತಡೆಹಿಡಿದನು. ಅಪ್ರಾಪ್ತೆ ಬಾಲಕಿ ಮನೆಗೆ ಹಿಂತಿರುಗುತ್ತಿದ್ದಳು. ಆಕೆ ಸಹಾಯಕ್ಕಾಗಿ ಕೂಗಿದಾಗ ಚಾಕು ತೋರಿಸಿ ಬೆದರಿಸಿದನು. ನಂತರ ಮತ್ತೊಬ್ಬ ಆರೋಪಿ ಮನೋಜ್ ಆಕೆ ಧರಿಸಿದ್ದ ಚೂಡಿದಾರದ ಶಾಲಿನಿಂದ ಬಾಲಕಿಯ ಮುಖ ಮುಚ್ಚಿದನು. ನಂತರ ಇಬ್ಬರು ಆರೋಪಿಗಳು ಬಾಲಕಿಯನ್ನು ಉದ್ಯಾನವನದ ಹಿಂದೆ ಶನಿಮಹಾತ್ಮ ದೇವಸ್ಥಾನದ ಬಳಿಯ ಪೊದೆಯೊಂದರ ಹತ್ತಿರ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ.