ಸಿಸಿಬಿ ಕಸ್ಟಡಿಯಲ್ಲಿರುವಾಗಲೇ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದ ರವಿ ಬೆಳಗೆರೆ!

ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಸಿಸಿಬಿ ಅಧಿಕಾರಿಗಳ ಕಸ್ಟಡಿಯಲ್ಲಿರುವಾಗಲೇ ಸಂತ್ರಸ್ಥ ಸುನಿಲ್ ಹೆಗ್ಗರವಳ್ಳಿ ಅವರಿಗೆ ಕರೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಸಿಸಿಬಿ ಅಧಿಕಾರಿಗಳ ಕಸ್ಟಡಿಯಲ್ಲಿರುವಾಗಲೇ ಸಂತ್ರಸ್ಥ ಸುನಿಲ್  ಹೆಗ್ಗರವಳ್ಳಿ ಅವರಿಗೆ ಕರೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ವತಃ ಸುನಿಲ್ ಹೆಗ್ಗರವಳ್ಳಿ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಿನ್ನೆ ಬೆಳಗ್ಗೆ ಸುಮಾರು 9.30ರ ಸುಮಾರಿನಲ್ಲಿ ರವಿ ಬೆಳಗೆರೆ ತಮ್ಮ ಆಪ್ತರೊಬ್ಬರ ಸಹಾಯದಿಂದ ನನಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ  ಯಶೋಮತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಕುರಿತು ಹೇಳಿಕೆ ನೀಡಿದ್ದೀಯಾ ಎಂದು ಪ್ರಶ್ನಿಸಿದರು. ಇದಕ್ಕೆ ನಾನು ಇಲ್ಲ ಎಂದು ಹೇಳಿದ್ದೆ. ಕೂಡಲೇ ಕರೆ ಕಟ್ ಮಾಡಿದರು ಎಂದು ಹೇಳಿದ್ದಾರೆ. ಅಂತೆಯೇ  ಕಸ್ಟಡಿಯಲ್ಲಿರುವ ವ್ಯಕ್ತಿ ಕರೆ ಮಾಡಿ ಪರೋಕ್ಷವಾಗಿ ಬೆದರಿಕೆ ಹಾಕುತ್ತಿರುವುದು ಪೊಲೀಸರ ಕಾರ್ಯದ ಮೇಲೆ ಶಂಕೆ ಮೂಡಿಸಿದೆ ಎಂದು ಹೆಗ್ಗರವಳ್ಳಿ ಅಳಲು ತೋಡಿಕೊಂಡಿದ್ದಾರೆ.
ಸಿಗರೇಟ್ ಮತ್ತು ಖಾಲಿ ಹಾಳೆಗಳಿಗಾಗಿ ಪಟ್ಟು ಹಿಡಿದ ಹಾಯ್ ಬೆಂಗಳೂರು ಸಂಪಾದಕ
ಇನ್ನು ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿದ್ದರೂ ತಮ್ಮ ಸಿಗರೇಟ್ ಚಾಳಿ ಮುಂದುವರೆಸಿರುವ ರವಿ ಬೆಳಗೆರೆ ಸಿಗರೇಟ್ ಗಾಗಿ ಸಿಸಿಬಿ ಅಧಿಕಾರಿಗಳನ್ನು ಪೀಡಿಸಿ ಘಟನೆ ಕೂಡ ಬೆಳಕಿಗೆ ಬಂದಿದೆ. ತಮಗೆ ಸಿಗರೇಟ್ ಬೇಕೇ ಬೇಕು ಎಂದು  ಬೆಳಗೆರೆ ಪಟ್ಟು ಹಿಡಿದಿದ್ದು ಮಾತ್ರವಲ್ಲದೇ ವಾಗ್ವಾದ ಕೂಡ ನಡೆಸಿದ್ದರು ಎಂದು ಹೇಳಲಾಗಿದೆ. ಸಿಗರೇಟ್ ಮಾತ್ರವಲ್ಲದೇ ಖಾಲಿ ಹಾಳೆಗಳೂ ಬೇಕು ಎಂದು ರವಿ ಬೆಳಗೆರೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ಕೊನೆಗೂ ರವಿ  ಬೆಳಗೆರೆ ಹಠಕ್ಕೆ ಮಣಿದ ಅಧಿಕಾರಿಗಳು ಸಿಗರೇಟ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com