ಬೆಳಗಾವಿ: ಬರಗಾಲದಿಂದ ಬೆಳೆ ನಷ್ಟವಾದದ್ದರಿಂದ ಕಂಗೆಟ್ಟು ರಾಮದುರ್ಗ ತಾಲೂಕಿನ 32 ವರ್ಷದ ರೈತ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವೆಂಕನಗೌಡ ಲಕ್ಷ್ಮಣಗೌಡ ಪಾಟೀಲ್ ಎಂಬ ರೈತ ಓಬಳಾಪುರ ಗ್ರಾಮದವರಾಗಿದ್ದು ತನ್ನ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ತೀವ್ರ ನಷ್ಟವಾಗಿದ್ದರಿಂದ ನೊಂದು ಬೆಳೆಗಳಿಗೆ ಸಿಂಪಡಿಸಲೆಂದು ತಂದಿದ್ದ ಕ್ರಿಮಿನಾಶಕ ಸೇವಿಸಿ ಮೊನ್ನೆ ಸಾಯಂಕಾಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳೆ ಬೆಳೆಯಲು ಬ್ಯಾಂಕುಗಳಿಂದ ಪಡೆದುಕೊಂಡಿದ್ದ ಸಾಲಕ್ಕೆ ಬಡ್ಡಿ ದಿನೇ ದಿನೇ ಹೆಚ್ಚಾಗುತ್ತಿದ್ದರಿಂದ ಇತ್ತ ಕಡೆ ಬೆಳೆಗಳು ಕೈಗೆ ಫಸಲು ಬಾರದೆ ಕಂಗೆಟ್ಟು ಈ ದುರಂತ ಅಂತ್ಯ ಕಂಡುಕೊಂಡಿದ್ದಾರೆ.
ಇವರು ರಾಮದುರ್ಗದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ 3 ಲಕ್ಷ ರೂಪಾಯಿ ಮತ್ತು ಫೈನಾನ್ಸ್ ಸೊಸೈಟಿಯೊಂದರಿಂದ 50,000 ಸಾಲ ಪಡೆದುಕೊಂಡಿದ್ದರು. ಹೊರಗೆ ವ್ಯಕ್ತಿಗಳಿಂದ 1 ಲಕ್ಷ ಸಾಲ ಪಡೆದಿದ್ದರು.