ಬೆಂಗಳೂರನ್ನು ಮತ್ತೊಂದು ಪಾಟ್ನಾ ಆಗಲು ಬಿಡಬೇಡಿ: ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ

ಬೆಂಗಳೂರು: ಬಿಬಿಎಂಪಿ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ತಪರಾಕಿ ಹಾಕಿದೆ.
ಅಪಾರ್ಟ್ ಮೆಂಟ್ ಗೆ ಸ್ವಾಧೀನ ಪ್ರಮಾಣಪತ್ರ ಮಂಜೂರು ಮಾಡದ ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಒಬ್ಬ ಸಾಫ್ಟ್ ವೇರ್ ಎಂಜಿನೀಯರ್ ಇಲ್ಲವೇ, ನಗರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕಟ್ಟಡ ನಿರ್ಮಾಣಗಳ ಬಗ್ಗೆ ಮಾಹಿತಿ ನೀಡುವ ಸಾಫ್ಟ್ ವೇರ್ ಇಲ್ಲವೇ, ಒಂದು ವೇಳೆ ನಿವಾಸಿಗಳು ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ದೂರು ದಾಖಲಿಸಿದರೇ, ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು. ಮಾಹಿತಿ ಲಭ್ಯವಿರುವುದು ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ, ನಿವಾಸಿಗಳಿಗೂ ಮಾಹಿತಿ ದೊರೆಯಬೇಕು ಎಂದು ನ್ಯಾಯಮೂರ್ತಿ ರಾಘವೇಂದ್ರ ಎಸ್ ಚೌಹಾಣ್ ಹೇಳಿದ್ದಾರೆ.
ಅಕ್ರಮ ಕಟ್ಟಡ ನಿರ್ಮಾಣಗಳ ಸಂಬಂಧ ಸ್ವೀಕರಿಸಿರುವ ದೂರುಗಳ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನ್ಯಾಯಾಲಯಕ್ಕೆ ವಿವರ ಸಲ್ಲಿಸಿದರು.
ಅಧಿಕಾರಿಗಳ ಕರ್ತವ್ಯಲೋಪ ಕೂಡ ಇದಕ್ಕೆ ಕಾರಣವಾಗಿದೆ, ಕೆಎಂಸಿ ಕಾನೂನಿನ ಪ್ರಕಾರ ಅವರಿಗೆ ಶಿಕ್ಷಿಸುವ ಅವಕಾಶ ಕಡಿಮೆ, ಹೀಗಾಗಿ ಇರುವ ಅಧಿಕಾರ ಬಳಸಿಕೊಂಡು ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಅವರು ಹೇಳಿದ್ದಾರೆ.
ಅಕ್ರಮ ಕಟ್ಟಗಳ ನಿರ್ಮಾಣದ ಕಾರಣದಿಂದಾಗಿ ಕೆರೆಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ, ಯಾರೋಬ್ಬರು ನೋವನ್ನು ತೆಗೆದುಕೊಳ್ಳುವುದಿಲ್ಲ, ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಅಲ್ಲಿ ಏಕೆ ತುಂಬಾ ಕೆಂಪು ಪಟ್ಟಿಗಳಿವೆ, ನಿಮ್ಮ ಮನೆಯನ್ನು ನೀವು ಆರ್ಡರ್ ನಲ್ಲಿಟ್ಟುಕೊಳ್ಳಿ, ಬೆಂಗಳೂರು ನಗರವನ್ನು ಬಿಹಾರದ ಪಾಟ್ನಾದಂತಾಗಲು ನಾವು ಬಿಡುವುದಿಲ್ಲ, ಹಲವು ಜನ ಇಲ್ಲಿಗೆ ಸೆಟಲ್ ಆಗಲು ಬರತ್ತಾರೆ. ನಿಮ್ಮ ಅಧಿಕಾರಿಗಳನ್ನು ಕೇಳಿ ನೋಡಿ ಎಲ್ಲರೂ ನೆಮ್ಮದಿಯಾಗಿದ್ದಾರಾ? ಇಲ್ಲದಿದ್ದರೇ ಅದಕ್ಕೆ ನೀವೆ ಜವಾಬ್ದಾರರು, ಜನರು ನಂಬಿಕೆ ಕಳೆದುಕೊಳ್ಳಲು ಆರಂಭಿಸುತ್ತಿದ್ದಾರೆ, ಬೆಂಗಳೂರು ಮತ್ತೊಂದು ಮುಂಬಯಿ ಇಲ್ಲವೇ ಪಾಟ್ನಾ ಆಗುತ್ತಿದೆ ಎಂದು ನಾಗರಿಕರು ಭಯ ಪಡುತ್ತಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಆಡಳಿತದ ಮೂಲ ತತ್ವಗಳ ಅರಿವಿಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


