ಮುಸ್ಲಿಮರ ಜನನ ನಿಯಂತ್ರಣಕ್ಕೆ ಸರ್ಕಾರ ಯತ್ನ ಎಂಬ ಸುದ್ದಿ : ದಡಾರ ಲಸಿಕೆ ಹಾಕುವುದನ್ನು ತಡೆದ ಪೋಷಕರು

ಮುಸ್ಲಿಂ ಸಮುದಾಯದ ಜನಸಂಖ್ಯೆ ತಗ್ಗಿಸಲು ಜನನ ನಿಯಂತ್ರಣ ಲಸಿಕೆ ಹಾಕಲಾಗುತ್ತಿದೆ ಎಂಬ ಸುಳ್ಳುಸುದ್ದಿಯಿಂದಾಗಿ ಶಾಲೆಗಳಲ್ಲಿ ಮಕ್ಕಳಿಗೆ ರುಬೆಲ್ಲಾ ಮತ್ತು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಭಟ್ಕಳ:  ಮುಸ್ಲಿಂ ಸಮುದಾಯದ ಜನಸಂಖ್ಯೆ ತಗ್ಗಿಸಲು ಜನನ ನಿಯಂತ್ರಣ ಲಸಿಕೆ ಹಾಕಲಾಗುತ್ತಿದೆ ಎಂಬ ಸುಳ್ಳುಸುದ್ದಿಯಿಂದಾಗಿ ಶಾಲೆಗಳಲ್ಲಿ ಮಕ್ಕಳಿಗೆ ರುಬೆಲ್ಲಾ ಮತ್ತು ದಡಾರ ಲಸಿಕೆ ಹಾಕುತ್ತಿದ್ದ ಆರೋಗ್ಯಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

ಶಾಲೆಗೆ ಬಂದ ಪೋಷಕರು, ಕೇಂದ್ರ ಸರ್ಕಾರ ಭಾರತದಲ್ಲಿ ಮುಸ್ಲಿಮರ ಜನನ ನಿಯಂತ್ರಿಸಲು  ಜನನ ನಿಯಂತ್ರಣ ಲಸಿಕೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಹಲ್ಲೆಗೆ ಯತ್ನಿಸಿದ್ದಾರೆ. ಹೀಗಾಗಿ ಮಂಗಳವಾರ ಶಾಲೆಗಳಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕುವ ಕಾರ್ಯಕ್ರಮ ರದ್ದಾಯಿತು.

ಜಾಮಿಯಾಬಾದ್ ನಲ್ಲಿರು ಆಂಗ್ಲ ಶಾಲೆಯಲ್ಲಿ ಲಸಿಕೆ ಹಾಕುವ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಮಕ್ಕಳ ಜನನ ನಿಯಂತ್ರಿಸಲು ಲಸಿಕೆ ನೀಡುತ್ತಿದೆ ಎಂಬ ಸುದ್ದಿ ಭಟ್ಕಳದಾದ್ಯಂತ ಹರಿದಾಡುತ್ತಿದೆ, ಹೀಗಾಗಿ ನಾವು ಲಸಿಕೆ ಹಾಕಲು ಬಿಡುವುದಿಲ್ಲ ಎಂದು ಪೋಷಕರೊಬ್ಬರು ಹೇಳಿದ್ದಾರೆ.

ಆರೋಗ್ಯಾಧಿಕಾರಿಗಳ ಮೇಲೆ ಹಲ್ಲೆಗೆ ಪೋಷಕರು ಯತ್ನಿಸಿದರು. ಈ ವೇಳೆ ಶಾಲಾ ಶಿಕ್ಷಕರು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಪೋಷಕರನ್ನು ಸಮಾಧಾನ ಪಡಿಸಿ ಅದೊಂದು ಸುಳ್ಳುಸುದ್ದಿ ಎಂದು ಹೇಳಿದರು. ಹೀಗಿದ್ದರೂ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com