ಡೆಡ್ ಲೈನ್ ಮುಗಿದರೂ ಮೊದಲ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲ್ಲ: ತಜ್ಞರು

ಅಂತಿಮ ಗಡುವು ಮುಗಿದರೂ ಮೊದಲ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಂತಿಮ ಗಡುವು ಮುಗಿದರೂ ಮೊದಲ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕೇಂದ್ರ ಅಂಕಿಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಅವರು, ಮೊದಲ ಹಂತದ ಮೆಟ್ರೋ ಕಾಮಗಾರಿಗೆ 2017 ಏಪ್ರಿಲ್ ಅಂತಿಮ ಗಡುವಾಗಿದ್ದು, ಅಂತಿಮ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.

ಕೆ.ಆರ್. ಮಾರುಕಟ್ಟೆ ಮತ್ತು ಚಿಕ್ಕಪೇಟೆ ಮಾರ್ಗದಲ್ಲಿ ಸುರಂಗ ಕೊರೆಯುವುದರಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮೊದಲ ಹಂತದ ಕಾಮಗಾರಿ ಗಡುವು ಮುಟ್ಟುವುದರಲ್ಲಿ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಈ ಬಗ್ಗೆ ಬಿಎಂಆರ್'ಸಿಎಪ್ ಅಧಿಕಾರಿಗಳು ಹೇಳಿಕೆ ನೀಡಿದ್ದು, ಸುರಂಗ ಮಾರ್ಗದಲ್ಲಿ ಈಗಲೂ ಕಾಮಗಾರಿ ಕೆಲಸಗಳು ಮುಂದುವರೆಯುತ್ತಿವೆ. ಕೆಲ ಕೇಬಲ್ ಕೆಲಸಗಳನ್ನು ಮಾಡಲಾಗುತ್ತಿದ್ದು, ಎಲೆಕ್ಟ್ರಿಕರ್ ಮತ್ತು ಟೆಲಿ ಕಮ್ಯುನಿಕೇಷನ್ ಸಿಸ್ಟಮ್ ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಹಳಿಗಳನ್ನು ಸಿದ್ಧಪಡಿಸಲಾಗಿದ್ದು, ಪರೀಕ್ಷೆ ಚಾಲನೆ ಫೆಬ್ರವರಿ 15 ರಿಂದ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಇನ್ನು ತಜ್ಞರು ಹೇಳುವ ಪ್ರಕಾರ, ಮೊದಲ ಹಂತಹ ಮೆಟ್ರೋ ಕಾಮಗಾರಿ ಏಪ್ರಿಲ್ ತಿಂಗಳಿನಲ್ಲಿ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ.

ಸಾರಿಗೆ ತಜ್ಞ ಎಂ.ಎನ್. ಶ್ರೀಹರಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಫೆಬ್ರವರಿ ತಿಂಗಳಿನಲ್ಲಿಯೇ ಪರೀಕ್ಷಾರ್ಥಕ ಚಾಲನೆಯನ್ನು ಆರಂಭಿಸಿದ್ದರೂ ಕೂಡ ಇನ್ನಿತರೆ ಪರೀಕ್ಷೆಗಳನ್ನು ನಡೆಸಲು ಕನಿಷ್ಟ ಮೂರು ತಿಂಗಳಾದರೂ ಬೇಕಾಗುತ್ತದೆ. ಮತ್ತು ಮೆಟ್ರೋ ರೈಲ್ವೆ ಭದ್ರತಾ ಆಯೋಗ ಕೆಲಸಗಳ ಮಾಡಲು ಮತ್ತೊಂದು ತಿಂಗಳು ತೆಗೆದುಕೊಲ್ಳುತ್ತಿದೆ. ಪರೀಕ್ಷಾರ್ಥಕ ಚಾಲನೆ ವೇಳೆ ಸಾಕಷ್ಟು ತಾಂತ್ರಿಕ ವಿಚಾರಗಳು ಬರುತ್ತವೆ. ಸಮಸ್ಯೆಗಳನ್ನು ಸರಿಪಡಿಸಲು ಮತ್ತಷ್ಟು ಸಮಯ ಬೇಕಾಗುತ್ತದೆ. ಪ್ರಯಾಣಿಕರ ಭದ್ರತೆಗೆ ಪರೀಕ್ಷಾರ್ಥಕ ಚಾಲನೆಗಳನ್ನು ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದು ಕೇವಲ ಉತ್ತರ-ದಕ್ಷಿಣ ಸುರಂಗದ ಕಾರಿಡಾರ್ ಗಳಲ್ಲಿ ಮಾತ್ರವೇ ಅಲ್ಲ, ಪೂರ್ವ ಮತ್ತು ಪಶ್ಚಿಮ ಸುರಂಗ ಕಾರಿಡಾರ್ ಗಳ ಕಾಮಗಾರಿಗಳಿಗೂ ಸಾಕಷ್ಟು ಸಮಯ ಬೇಕಾಗುತ್ತದೆ.

2011ರಲ್ಲಿಯೂ ಕಬ್ಬನ್ ಪಾರ್ಕ್ ನಿಂದ ನಗರ ರೈಲ್ವೇ ನಿಲ್ದಾಣದ ಸುರಂಗ ಕೊರೆತದ ವೇಳೆಯಲ್ಲಿಯೂ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಈ ವೇಳೆ ಬಿಎಂಆರ್ ಸಿಎಲ್ ಸಾಕಷ್ಟು ಬಾರಿ ಅಂತಿಮ ಗಡುವು ತಲುಪಲು ಸಾಧ್ಯವಾಗಿರಲಿಲ್ಲ. 2015ರ ಡಿಸೆಂಬರ್ ತಿಂಗಳಿನಲ್ಲಿ ಅಂತಿಮ ಗಡುವು ನೀಡಲಾಗಿತ್ತು. ನಂತರ ಇದು ಜನವರಿ 2016ಕ್ಕೆ ಹೋಗಿತ್ತು. ಈ ವೇಳೆಯೂ ಗಡುವು ಮುಟ್ಟಲು ಸಾಧ್ಯವಾಗದೆ ಫೆಬ್ರವರಿ ತಿಂಗಳಿನಲ್ಲೂ ಪೂರ್ಣಗೊಳ್ಳಲಿದೆ ಎಂದು ಹೇಳಿತ್ತು. ಇದಾದ ಬಳಿ ಮಾರ್ಚ್ ಗೆ ಮುಂದೂಡಲಾಯಿತು. ಕೊನೆಗೆ 2016 ಏಪ್ರಿಲ್ 29 ರಂದು ಮೆಟ್ರೋ ಮಾರ್ಗವನ್ನು ತೆರೆಯಲಾಗಿತ್ತು. ಇದೀಗ ಇದೇ ರೀತಿಯ ಪರಿಸ್ಥಿತಿ ಉತ್ತರ-ದಕ್ಷಿಣ ಸುರಂಗ ಮಾರ್ಗದಲ್ಲೂ ಉಂಟಾಗಲಿದೆ ಎಂದು ಹೇಳಲಾಗುತ್ತದೆ.

ಮೊದಲ ಹಂತದ 42 ಕಿ.ಮೀನ ಮೆಟ್ರೋ ಕಾಮಗಾರಿಯನ್ನು ರು.5,400 ಕೋಟಿ ವೆಚ್ಚದಲ್ಲಿ 2006ರಲ್ಲಿ ಬಿಎಂಆರ್ ಸಿಎಲ್ ಆರಂಭ ಮಾಡಿತ್ತು. 2012 ಡಿಸೆಂಬರ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಅದರ ಬಜೆಟ್ ಮೂರರಷ್ಟು ಹೆಚ್ಚಾಗಿದ್ದು, ರು.13,845 ಕೋಟಿಯಷ್ಟು ಹಣ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com