ತೀವ್ರಗೊಂಡ ಜಲ್ಲಿಕಟ್ಟು ಪ್ರತಿಭಟನೆ: ಅಂತರ್ ರಾಜ್ಯ ಬಸ್ ಸೇವೆಗಳ ಮೇಲೆ ಪರಿಣಾಮವಿಲ್ಲ

ತಮಿಳುನಾಡಿನಾದ್ಯಂತ ಬಂದ್ ಆಚರಿಸಲಾಗುತ್ತಿದ್ದು, ಅಂತರ್ ರಾಜ್ಯಗಳ ಬಸ್ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮಗಳಾಗಿಲ್ಲ ಎಂದು ಕೆಎಸ್ಆರ್'ಟಿಸಿ ಮತ್ತು ಟಿಎನ್ಎಸ್'ಟಿಸಿ ಅಧಿಕಾರಿಗಳು...
ಕೆಎಸ್ಆರ್'ಟಿಸಿ ಮತ್ತು ಟಿಎನ್ಎಸ್'ಟಿಸಿ ಬಸ್ ಗಳು
ಕೆಎಸ್ಆರ್'ಟಿಸಿ ಮತ್ತು ಟಿಎನ್ಎಸ್'ಟಿಸಿ ಬಸ್ ಗಳು

ಬೆಂಗಳೂರು: ತಮಿಳುನಾಡಿನಾದ್ಯಂತ ಬಂದ್ ಆಚರಿಸಲಾಗುತ್ತಿದ್ದು, ಅಂತರ್ ರಾಜ್ಯಗಳ ಬಸ್ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮಗಳಾಗಿಲ್ಲ ಎಂದು ಕೆಎಸ್ಆರ್'ಟಿಸಿ ಮತ್ತು ಟಿಎನ್ಎಸ್'ಟಿಸಿ ಅಧಿಕಾರಿಗಳು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಜಲ್ಲಿಕಟ್ಟು ವಿವಾದ ತಾರಕ್ಕೇರಿದ್ದು, ತಮಿಳುನಾಡಿನಾದ್ಯಂತ ಇಂದು ಬಂದ್ ಆಚರಿಸಲಾಗುತ್ತಿದೆ. ಬಂದ್ ಕರೆಗೆ ಅಲ್ಲಿನ ಸಾರಿಗೆ ಒಕ್ಕೂಟಗಳು ಬೆಂಬಲ ನೀಡಿದ್ದು, ಈ ಹಿನ್ನಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸಾರಿಗೆ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿತ್ತು.

ಈ ಹಿನ್ನಲೆಯಲ್ಲಿ ಕೆಎಸ್ಆರ್ ಟಿಸಿ ಮತ್ತು ಟಿಎನ್ಎಸ್ ಸಿಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಬಂದ್ ಆಚರಣೆಯಿಂದಾಗಿ ರಾಜ್ಯದ ಸಾರಿಗೆ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ ಎಂದು ಹೇಳಿದೆ.

ಕೆಎಸ್ಆರ್ ಟಿಸಿ ಅಧಿಕಾರಿಗಳು ಹೇಳಿಕೆ ನೀಡಿದ್ದು, ಜಲ್ಲಿಕಟ್ಟು ಪ್ರತಿಭಟನೆಯಿಂದಾಗಿ ಯಾವುದೇ ರೀತಿಯ ಕೆಟ್ಟ ಘಟನೆಗಳು ನಡೆದಿಲ್ಲ. ಹೀಗಾಗಿ ತಮಿಳುನಾಡಿಗೆ ಎಂದಿನಂತೆ ಬಸ್ ಗಳು ತನ್ನ ಸಂಚಾರವನ್ನು ಆರಂಭಿಸಲಿದೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರತಿಭಟನೆಯಿಂದಾಗಿ ಕರ್ನಾಟಕ ಮೇಲೆ ಯಾವುದೇ ಪರಿಣಾಮವಿಲ್ಲ. ಆದರೂ, ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ರಾಜ್ಯ ಕಣ್ಗಾವಲಿರಿಸಿದೆ ಎಂದು ಹೇಳಿದ್ದಾರೆ.

ಟಿಎನ್ಎಸ್ ಟಿಸಿ ಅಧಿಕಾರಿಗಳು ಮಾತನಾಡಿ ಪ್ರತೀ ನಿತ್ಯ ಕರ್ನಾಟಕದಿಂದ 410 ಬಸ್ ಗಳು ತಮಿಳುನಾಡಿಗೆ ಬರುತ್ತವೆ. ರಾಜ್ಯದಿಂದಲೂ 596 ಬಸ್ ಗಳು ಕರ್ನಾಟಕ್ಕೆ ಹೋಗುತ್ತಿರುತ್ತವೆ. ಪ್ರತಿಭಟನೆಯಿಂದ ರಾಜ್ಯದ ಸಾರಿಗೆ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com