ಏರ್ ಶೋ, ಕಾಮಗಾರಿ ಪ್ರಯುಕ್ತ ಕೆಂಪೇಗೌಡ ವಿಮಾನ ನಿಲ್ದಾಣದ ರನ್ ವೇ 2 ತಿಂಗಳು ಬಂದ್

ರಿಹರ್ಸಲ್ ಹಿನ್ನೆಲೆಯಲ್ಲಿ ಏರೋ ಇಂಡಿಯಾ 2017 ಶೋ ಪ್ರಯುಕ್ತ ಕೆಂಪೇಗೌಡ ಅಂತಾರಾಷ್ಟ್ರೀಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ರಿಹರ್ಸಲ್ ಹಿನ್ನೆಲೆಯಲ್ಲಿ ಏರೋ ಇಂಡಿಯಾ 2017 ಶೋ ಪ್ರಯುಕ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯನ್ನು ಭಾಗಶಃ ಮುಚ್ಚಲಾಗಿದೆ. ಫೆಬ್ರುವರಿ 8ರಿಂದ 11ರವರೆಗೆ ಮಧ್ಯಾಹ್ನ 1.30ರಿಂದ 4.30ರವರೆಗೆ ರನ್ ವೇ ಮುಚ್ಚಲಾಗುತ್ತಿದ್ದು, ಏರ್ ಶೋ ಫೆಬ್ರುವರಿ 12ರಿಂದ 18ರವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12ರವರೆಗೆ, ಅಪರಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ.
ನಂತರ ಫೆಬ್ರುವರಿ 19ರಿಂದ ಏಪ್ರಿಲ್ 30ರವರೆಗೆ ಬೆಳಗ್ಗೆ 10.30ರಿಂದ ಸಾಯಂಕಾಲ 5ರವರೆಗೆ ರನ್ ವೇಯ ಭಾಗಶಃ ಮೇಲ್ದರ್ಜೆಗೇರಿಸುವ ಕೆಲಸದ ನಿಮಿತ್ತ ಮುಚ್ಚಲಾಗುತ್ತದೆ. ಹಂತ ಹಂತವಾಗಿ ಕೆಲಸ ನಡೆಯಲಿದೆ. ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ವಾಯು ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ.
ಇದರಿಂದ ಆ ದಿನಗಳಲ್ಲಿ ಕೆಲವು ವಿಮಾನಗಳ ಹಾರಾಟ  ರದ್ದು ಮತ್ತು ಕೆಲವು ವಿಮಾನಗಳ ಹಾರಾಟದ ಸಮಯ ಬದಲಾಗಲಿದೆ. ಪ್ರಯಾಣಿಕರು www.bengalurusirport.com, ನಲ್ಲಿ ಮತ್ತು ಟ್ವಿಟ್ಟರ್ ನಲ್ಲಿ @BLRAirport ಮತ್ತು BLRAirportApp ನಲ್ಲಿ ನೋಡಬಹುದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com