ಕಳ್ಳ ಸಾಗಣೆ ಆರೋಪ: ಕಂಟೋನ್ಮೆಂಟ್ ನಿಲ್ದಾಣದಲ್ಲಿ ಪೊಲೀಸರಿಂದ ಮದರಸಾ ಸಿಬ್ಬಂದಿ ವಿಚಾರಣೆ

ಮಾನವ ಕಳ್ಳ ಸಾಗಣೆದಾರರು ಮತಾಂತರಕ್ಕೆ ಮತ್ತು ಅಕ್ರಮ ಬಿಕ್ಷಾಟನೆಗಾಗಿ ಮಕ್ಕಳನ್ನು ಕರೆತರುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಮಂಗಳವಾರ ಪೊಲೀಸರು ಗುವಾಹತಿಯಿಂದ ನಗರಕ್ಕೆ ರೈಲಿನಲ್ಲಿ ಬಂದ ಶಿಕ್ಷಕರನ್ನು ವಿಚಾರಣೆ ನಡೆಸಿದ ಪ್ರಸಂಗ ನಡೆದಿದೆ.
ನಿಲ್ದಾಣದಲ್ಲಿ ವಿಚಾರಣೆ ವೇಳೆ ಇಳಿದಿದ್ದ ಮದರಸಾಗೆ ಸೇರಿದ ಬಾಲಕರು
ನಿಲ್ದಾಣದಲ್ಲಿ ವಿಚಾರಣೆ ವೇಳೆ ಇಳಿದಿದ್ದ ಮದರಸಾಗೆ ಸೇರಿದ ಬಾಲಕರು

ಬೆಂಗಳೂರು: ಮಾನವ ಕಳ್ಳ ಸಾಗಣೆದಾರರು ಮತಾಂತರಕ್ಕೆ ಮತ್ತು ಅಕ್ರಮ ಬಿಕ್ಷಾಟನೆಗಾಗಿ ಮಕ್ಕಳನ್ನು ಕರೆತರುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಮಂಗಳವಾರ ಪೊಲೀಸರು ಗುವಾಹತಿಯಿಂದ ನಗರಕ್ಕೆ ರೈಲಿನಲ್ಲಿ ಬಂದ  ಶಿಕ್ಷಕರನ್ನು ವಿಚಾರಣೆ ನಡೆಸಿದ ಪ್ರಸಂಗ ನಡೆದಿದೆ.

ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಗುವಾಹತಿಯಿಂದ ಬೆಂಗಳೂರಿಗೆ ಆಗಮಿಸಿದ ರೈಲಿನಲ್ಲಿ ಸುಮಾರು 260ಕ್ಕೂ ಹೆಚ್ಚು ಮಕ್ಕಳನ್ನು ಅಕ್ರಮವಾಗಿ ಕಳ್ಳ ಸಾಗಣೆ ಮಾಡುತ್ತಿದ್ದಾರೆ  ಎಂಬ ಆರೋಪದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆ ಬಳಿಕ ಈ ಎಲ್ಲ ಮಕ್ಕಳು ಮದರಸಾದಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ನಗರದ ಮದರಸಾಗಳಲ್ಲಿ ಒಂದು ವರ್ಷದ ಕೋರ್ಸ್‌ ಗಾಗಿ ಮಕ್ಕಳನ್ನು ಗುವಾಹತಿಯಿಂದ ಕರೆದುಕೊಂಡು ಬರಲಾಗಿದ್ದು, ಮಕ್ಕಳನ್ನು ಕರೆತರಲು 8 ಮಂದಿ ಶಿಕ್ಷಕರು ತೆರಳಿದ್ದರು ಎಂದು  ತಿಳಿದುಬಂದಿದೆ. ಮಕ್ಕಳು ತಂದಿದ್ದ ದಾಖಲೆಗಳಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಅಪರಾಧ) ಜಿನೇಂದ್ರ ಕಣಗವಿ ತಿಳಿಸಿದ್ದಾರೆ.

ಕೆಆರ್‌ ಪುರಂ, ಬೈಯ್ಯಪ್ಪನಹಳ್ಳಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳಲ್ಲಿ ಬೆಳಿಗ್ಗೆ 12 ಗಂಟೆಯ ಸುಮಾರಿನಲ್ಲಿ ಗುವಾಹತಿಯಿಂದ ಬಂದ ರೈಲಿನಲ್ಲಿ ಗುಂಪು ಗುಂಪಾಗಿ ಮಕ್ಕಳು ಇಳಿಯುತ್ತಿರುವುದನ್ನು ಕಂಡ ಸ್ಥಳೀಯರು ನೀಡಿದ  ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ ಕೆ.ಆರ್.ಪುರ ರೈಲು ನಿಲ್ದಾಣದಲ್ಲಿ 40 ಮಕ್ಕಳು ಮತ್ತು ಇತರ ರೈಲ್ವೆ ನಿಲ್ದಾಣಗಳಲ್ಲಿ 260 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಸಿ ಅವರ ಜೊತೆಗಿದ್ದ  ಶಿಕ್ಷಕರನ್ನು ವಶಕ್ಕೆ ತೆಗದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಕ್ಕಳನ್ನು ಮದರಸಾದಲ್ಲಿ ಕಲಿಸಲು ಕರೆದುಕೊಂಡು ಬರಲಾಗುತ್ತಿತ್ತು ಎಂದು ಅವರ ಜೊತೆಗಿದ್ದ ಶಿಕ್ಷಕರು ತಿಳಿಸಿದ್ದಾರೆ.

ರಂಜಾನ್ ರಜೆ ನಿಮಿತ್ತ ರಜೆ ಮೇಲೆ ತೆರಳಿದ್ದ ಮಕ್ಕಳನ್ನು ಇದೀಗ ಪುನಃ ವಾಪಸ್ ಕರೆತರಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ. ಆದರೂ ಅನುಮಾನದ ಮೇರೆಗೆ ಶಿಕ್ಷಕರು ಹಾಗೂ ಮಕ್ಕಳ ಬಳಿಯಿದ್ದ ದಾಖಲಾತಿಗಳನ್ನು  ಪರಿಶೀಲಿಸಲಾಗಿದ್ದು, ಈ ವೇಳೆ ಮಕ್ಕಳನ್ನು ಮದರಸಾದಲ್ಲಿ ಕಲಿಸಲು ಕರೆದುಕೊಂಡು ಬರುತ್ತಿರುವುದು ಖಚಿತಗೊಂಡಿದ್ದು, ಎಲ್ಲಾ ಮಕ್ಕಳನ್ನು ಶಿಕ್ಷಕರ ಜೊತೆ ಕಳುಹಿಸಲಾಗಿದೆ.ಯ ಮಕ್ಕಳು ಸಾಗರ, ತುಮಕೂರು ಮತ್ತು  ಮಡಿಕೇರಿಯಲ್ಲಿ ಮದರಸಾಗಳಿಗೆ ಸೇರಿದವರೆನ್ನಲಾಗಿದೆ ಎಂದು ಕಣಗವಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com