ಮಂಗಳೂರಿನಲ್ಲಿ ಬಾರ್ಜ್ ದುರಂತ: ನೌಕೆಯಲ್ಲಿದ್ದ ಎಲ್ಲ 27 ಮಂದಿ ಸಿಬ್ಬಂದಿ ರಕ್ಷಣೆ!

ಮಂಗಳೂರಿನ ಉಲ್ಲಾಳದಲ್ಲಿ ಪ್ರತೀಕೂಲ ಹವಾಮಾನದಿಂದಾಗಿ ದುರಂತಕ್ಕೀಡಾದ ಬಾರ್ಜ್ ನಲ್ಲಿದ್ದ ಎಲ್ಲ 27 ಮಂದಿ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಾಯಕ್ಕೆ ಸಿಲುಕಿರುವ ಬಾರ್ಜ್
ಅಪಾಯಕ್ಕೆ ಸಿಲುಕಿರುವ ಬಾರ್ಜ್

ಮಂಗಳೂರು: ಮಂಗಳೂರಿನ ಉಲ್ಲಾಳದಲ್ಲಿ ಪ್ರತೀಕೂಲ ಹವಾಮಾನದಿಂದಾಗಿ ದುರಂತಕ್ಕೀಡಾದ ಬಾರ್ಜ್ ನಲ್ಲಿದ್ದ ಎಲ್ಲ 27 ಮಂದಿ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಸಂಜೆಯಿಂದ ನಡೆದ ರಕ್ಷಣಾ ಕಾರ್ಯಾಚರಣೆ ರಾತ್ರಿ ಸ್ಥಗಿತವಾಗಿತ್ತಾದರೂ ಇಂದು ಮುಂಜಾನೆ ಪಣಂಬೂರಿನ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಮತ್ತೆ ರಕ್ಷಣಾ ಕಾರ್ಯಾಚರಣೆ ನಡೆಸಿ ಬಾರ್ಜ್ ನಲ್ಲಿ ಎಲ್ಲ 27  ಸಿಬ್ಬಂದಿಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಸಚಿವ ಯುಟಿ ಖಾದರ್ ತೆರಳಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು. ಅಲ್ಲದೆ ಬಾರ್ಜ್ ನಲ್ಲಿದ್ದ ಸಿಬ್ಬಂದಿಗಳು ದಡಕ್ಕೆ  ಆಗಮಿಸುತ್ತಿದ್ದಂತೆಯೇ ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರಿನ ಉಲ್ಲಾಳದ ಮೊಗವೀರಪಟ್ಣ ಸಮೀಪ ಕಡಲ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ನಿರತವಾಗಿದ್ದ ಬಾರ್ಜ್‌ ಪ್ರತೀಕೂಲ ಹವಾಮಾನ ಮತ್ತು ಭಾರಿ ಅಲೆಗಳ ಹೊಡೆತದಿಂದಾಗಿ ಶನಿವಾರ ಆಪಾಯಕ್ಕೆ  ಸಿಲುಕಿತ್ತು. ಶನಿವಾರ ಮಧ್ಯಾಹ್ನವೇ ಮಂಗಳೂರಿನ ಕರಾವಳಿ ರಕ್ಷಣಾ ಪಡೆಗೆ ಆಪಾಯದ ಮುನ್ಸೂಚನೆ ರವಾನಿಸಿತ್ತಾದರೂ ಪ್ರತೀಕೂಲ ಹವಾಮಾನದಿಂದಾಗಿ ಕರಾವಳಿ ರಕ್ಷಣಾ ಪಡೆಯ ನೌಕೆ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ.  ಹೀಗಾಗಿ ರಕ್ಷಣಾ ಸಿಬ್ಬಂದಿ ಒಂದಷ್ಟು ಹೊತ್ತು ಕಾದರು.

ಆದರೆ ಸಂಜೆ ಹೊತ್ತಿಗೆ ಬಾರ್ಜ್ ಮುಳುಗುವ ಹಂತಕ್ಕೆ ತಲುಪುತ್ತಿದ್ದಂತೆಯೇ ಅದರಲ್ಲಿದ್ದ ಸಿಬ್ಬಂದಿ ಸ್ಫೋಟಕಗಳನ್ನು ಸಿಡಿಸಿ ತಾವು ತೀರಾ ಅಪಾಯದಲ್ಲಿದ್ದೇವೆ ಎಂಬ ಮಾಹಿತಿ ರವಾನಿಸಿದ್ದರು. ಎರಡು ಬಾರಿ ಸ್ಫೋಟಕ  ಸ್ಫೋಟಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಗಳು ಡಿಂಗಿ (ಸಣ್ಣ ಗಾತ್ರದ ಫೈಬರ್‌ ಬೋಟ್‌)ಗಳನ್ನು ಬಾರ್ಜ್‌ ಬಳಿಗೆ ಕಳುಹಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಇದೀಗ ಬಾರ್ಜ್ ನಲ್ಲಿದ್ದ ಎಲ್ಲ 27 ಮಂದಿ  ಸಿಬ್ಬಂದಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com