ಯೋಗಾಸನ: ಗಿನ್ನಿಸ್ ದಾಖಲೆಗಾಗಿ ಮೈಸೂರು ಸಿದ್ಧತೆ

ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಒಂದೇ ಕಡೆ ಏಕಕಾಲದಲ್ಲಿ 60 ಸಾವಿರ ಜನರಿಂದ ಯೋಗಾಸನ ಪ್ರದರ್ಶಿಸಿ ಗಿನ್ನಿಸ್‌ ದಾಖಲೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಮೈಸೂರು: ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಒಂದೇ ಕಡೆ ಏಕಕಾಲದಲ್ಲಿ 60 ಸಾವಿರ ಜನರಿಂದ ಯೋಗಾಸನ ಪ್ರದರ್ಶಿಸಿ ಗಿನ್ನಿಸ್‌ ದಾಖಲೆ ನಿರ್ಮಿಸಲು ಮೈಸೂರು  ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಬೆಳಗ್ಗೆ 6.30 ರಿಂದ ಸಂಜೆ 7.30ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 65 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ನಿರೀಕ್ಷಿಸಿದ್ದಾರೆ.
ಮೈಸೂರು ಅರಮನೆ ಸೇರಿದಂತೆ ಓವಲ್ ಮೈದಾನ, ಮಹಾರಾಜ ಕಾಲೇಜು ಮೈದಾನ, ಜೆಕೆ ಗ್ರೌಂಡ್ಸ್, ಸೇರಿದಂತೆ ಮೈಸೂರಿನ ಆರು ಸ್ಥಳಗಳಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ.
2015ರಲ್ಲಿ ನಡೆದ ಯೋಗ ದಿನಾಚರಣೆ ವೇಳೆ ನವದೆಹಲಿಯ ರಾಜಪಥ್‌ ರಸ್ತೆಯಲ್ಲಿ 38,500 ಯೋಗಾಪಟುಗಳನ್ನು ಸೇರಿಸಿರುವುದು ಇದುವರೆಗಿನ ಗಿನ್ನಿಸ್‌ ದಾಖಲೆ ಆಗಿದೆ.
ದಾಖಲೆ ನಿಟ್ಟಿನಲ್ಲಿ ಈಗಾಗಲೇ ಗಿನ್ನಿಸ್‌ ಸಂಸ್ಥೆಯಲ್ಲಿ ನೋಂದಣಿ ಮಾಡಿದ್ದು, ಪರಿಶೀಲನೆಗಾಗಿ ಸಂಸ್ಥೆಯ ಪ್ರತಿನಿಧಿಗಳು ಹಾಜರಿರಲಿದ್ದಾರೆ. 250 ಯೋಗ ಗುರುಗಳು ಮಾರ್ಗದರ್ಶನ ನೀಡಲಿದ್ದು, ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಜೂನ್‌ 11 ಹಾಗೂ 18ರಂದು ಪೂರ್ವಭಾವಿ ಪ್ರದರ್ಶನ ಏರ್ಪಡಿಸಿದ್ದು, ವಿವಿಧ ಸಮಿತಿಗಳನ್ನು ರಚಿಸಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com