ಪ್ರಧಾನಿ ಮೋದಿಗೆ ಟ್ವೀಟ್ ಮಾಡಿ ಸಮಸ್ಯೆ ಬಗೆಹರಿಸಿಕೊಂಡ ಕೊಪ್ಪಳ ರೈತ!

ಪ್ರಧಾನಿಗೆ ಮಾಡಿದ ಟ್ವೀಟ್ ನಿಂದಾಗಿ ಕೊಪ್ಪಳದ ರೈತರೊಬ್ಬರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ..
ಮೋದಿ ಮತ್ತು ರೈತ ವಿಜಯ್
ಮೋದಿ ಮತ್ತು ರೈತ ವಿಜಯ್
Updated on: 
ಕೊಪ್ಪಳ: ಪ್ರಧಾನಿಗೆ ಮಾಡಿದ ಟ್ವೀಟ್ ನಿಂದಾಗಿ ಕೊಪ್ಪಳದ ರೈತರೊಬ್ಬರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ.
ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ರೈತ ವಿಜಯಕುಮಾರ್ ಯತ್ನಳ್ಳಿ ಅವರ ಜಮೀನಿನಲ್ಲಿದ್ದ ಕಬ್ಬಿಣದ ವಿದ್ಯುತ್ ಕಂಬವೊಂದು ಬಾಗಿತ್ತು.  ವಿದ್ಯುತ್ ಕಂಬ ಬಾಗಿದ್ದರಿಂದ ಪ್ರತಿ ವರ್ಷ ಉಳುಮೆ ಮಾಡಲು ಇವರಿಗೆ ತೊಂದರೆ ಆಗುತಿತ್ತು.
ಈ ಸಮಸ್ಯೆ ನಿವಾರಣೆಗೆ ವಿಜಯಕುಮಾರ್ ಅವರು ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೆ ಇವರ ಮನವಿ ಅಧಿಕಾರಿಗಳಿಗೆ ಕೇಳಿಸಲೇ ಇಲ್ಲ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತ ರೈತ ವಿಜಯ್‍ಕುಮಾರ್ ಅವರು ಈ ಸಮಸ್ಯೆಯನ್ನು ಬಗೆ ಹರಿಸಲು ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ.
ಪ್ರಧಾನಿಗೆ ಟ್ವೀಟ್ ಮಾಡಿದ ವಿಚಾರ ತಿಳಿದು ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು ದಿಢೀರ್ ಆಗಿ ಗುರುವಾರ ಜಮೀನಿಗೆ ಬಂದು ಕಂಬವನ್ನು ಬದಲಾಯಿಸಿ ಹೋಗಿದ್ದಾರೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ  ಜೆಸ್ಕಾಂ ಗೆ ಸೂಚನೆ ಬಂದಿದೆಯೊ ಇಲ್ಲವೋ ಎಂಬುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ವಿಜಯ್ ಕುಮಾರ್  ಹೇಳಿದ್ದಾರೆ.
ಪಿಎಂ ಕಚೇರಿಯಿಂದ ಯಾವುದೇ ಸೂಚನೆ ಬಂದಿಲ್ಲ, ನಮ್ಮ ದೈನಂದಿನ ಕರ್ತವ್ಯದಂತೆ ಈ ಕೆಲಸವನ್ನು ಕೂಡ ಮಾಡಿದ್ದೇವೆ ಎಂದು ಜೆಸ್ಕಾಂ ಎಂಜಿನೀಯರ್ ಎಂ.ಎಸ್ ಪತ್ತಾರ್ ಸ್ಪಷ್ಟ ಪಡಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com