ಬೆಂಗಳೂರು: ವೃದ್ಧಾಪ್ಯ ವೇತನ ಕೊಡಿಸುವ ನೆಪದಲ್ಲಿ ಮಹಿಳೆಗೆ ವಂಚನೆ

ವೃದ್ಧಾಪ್ಯ ವೇತನ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ ಆಕೆಯ ಚಿನ್ನಾಭರಣಗಳನ್ನು ವಂಚಿಸಿರುವ ಘಟನೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್...
ಲಕ್ಷ್ಮಿದೇವಿ
ಲಕ್ಷ್ಮಿದೇವಿ
ಬೆಂಗಳೂರು: ವೃದ್ಧಾಪ್ಯ ವೇತನ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ ಆಕೆಯ ಚಿನ್ನಾಭರಣಗಳನ್ನು ವಂಚಿಸಿರುವ ಘಟನೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಹಿಳೆಯನ್ನು ಪಕ್ಕದ ಬ್ಯಾಂಕ್ ಗೆ ಕರೆದುಕೊಂಡು ಹೋದ ವ್ಯಕ್ತಿ, ಅಲ್ಲಿ ದಾಖಲೆಗಳನ್ನು ನೀಡಬೇಕೆಂದು ಹೇಳಿ ಆಕೆಯ ಬಳಿಯಿದ್ದ ಚಿನ್ನದ ಒಡವೆಗಳನ್ನು ಬಿಚ್ಚಿಸಿಕೊಂಡು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.
ಕಮರ್ಷಿಯಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗಮ ರಸ್ತೆಯ ನಿವಾಸಿ ಲಕ್ಷ್ಮಿ ದೇವಿ(68) ಮನೆಗೆ ಹಿಂತಿರುಗುವಾಗ ಬಂದ ಅಪರಿಚಿತ ವ್ಯಕ್ತಿಯೊಬ್ಬ ಅಕೆಯನ್ನು ನಿಲ್ಲಿಸಿ ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ್ದೀರಾ ಎಂದು ಕೇಳಿದ್ದಾನೆ, ಈ ವೇಳೆ ಲಕ್ಷ್ಮಿ ದೇವಿ ಇಲ್ಲ ಎಂದು ಹೇಳಿದ್ದಾರೆ. 
ಅದಕ್ಕೆ ಸಮಯವಿದೆ ಬನ್ನಿ ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿ ಆಕೆಯನ್ನು ಕಾಮರಾಜ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಗೆ ಕರೆದು ಕೊಂಡು ಹೋಗಿದ್ದಾನೆ. ಬ್ಯಾಂಕ್ ಪ್ರವೇಶಿಸುವ ಮುನ್ನ, ಕೊರಳಲ್ಲಿರುವ ಚಿನ್ನದ ಸರ ತೆಗೆಯುವಂತೆ ಒತ್ತಾಯಿಸಿದ್ದಾನೆ. ಬ್ಯಾಂಕ್ ಅಧಿಕಾರಿಗಳು ಚಿನ್ನದ ಸರ ನೋಡಿದರೇ ನಿನ್ನನ್ನು ಶ್ರೀಮಂತೆ ಎಂದು ತಿಳಿದುಕೊಳ್ಳುತ್ತಾರೆ ಅನಂತರ ನಿನ್ನ ಅರ್ಜಿಯನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾನೆ.
ಆಕೆಯ ಸರವನ್ನು ತೆಗೆಸಿ ತನ್ನ ಪರ್ಸ್ ನಲ್ಲಿಟ್ಟುಕೊಂಡ ಅಪರಿಚಿತ ಬ್ಯಾಂಕ್ ಹೊರಗೆ ಕಾಯುವಂತೆ ಹೇಳಿ, ಆಧಾರ್ ಕಾರ್ಡ್ ಫೋಟೋ ಕಾಪಿ ತರುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾನೆ.
ಆದರೆ ಎಷ್ಟು ಹೊತ್ತಾದರೂ ಆತ ವಾಪಸ್ ಬಾರದ ಹಿನ್ನೆಲೆಯಲ್ಲಿ ಆಕೆ ಕೂಗಿಕೊಂಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಸ್ಥಳಕ್ಕಾಗಿಮಿಸಿದ್ದಾರೆ. ಆದರೆ ಬ್ಯಾಂಕ್ ಹೊರಗಡೆ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಅಕ್ಕಪಕ್ಕದ ರಸ್ತೆಯಲ್ಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಲಕ್ಷ್ಮಿ ದೆವಿಗೂ ಮುನ್ನ ಆತ ಮತ್ತೊಬ್ಬ ಮಹಿಳೆಗೆ ಇದೇ ರೀತಿ ಒತ್ತಾಯ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ನಾನು ಈ ಹಿಂದೆ ಯಾವತ್ತೂ ನೋಡಿಲ್ಲ, ನನಗೆ ಬ್ಯಾಂಕ್ ಅದಿಕಾರಿಗಳು ಗೊತ್ತು, ಪಿಂಚಣಿ ಬರುವಂತೆ ಮಾಡಲು ಸಹಾಯ ಮಾಡುವುದಾಗಿ ಕರೆತಂದ ಎಂದು ಮಹಿಳೆ ಹೇಳಿದ್ದಾರೆ. ನಾನು ಮತ್ತೊಬ್ಬ ಮಹಿಳೆ ಜೊತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬಂದ. ಹೆಸರು ಕೇಳಿದರೇ ಹೇಳಲಿಲ್ಲ, ನಾನು 60 ಸಾವಿರ ರು. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ ಎಂದು ಲಕ್ಷ್ಮಿ ದೇವಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com