ಸಂಚಾರಿ ನಿಯಮ ಉಲ್ಲಂಘನೆ: ಕಾರ್ಡ್ ಮೂಲಕ ದಂಡ ಪಾವತಿ ಸೌಲಭ್ಯ ಸದ್ಯದಲ್ಲೆ

ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರು ತಮ್ಮ ಡೆಬಿಟ್ ಕಾರ್ಡ್ ಬಳಸುವ ಮೂಲಕ ದಂಡ ಪಾವತಿಸಬಹುದಾಗಿದೆ. ಈ ತಿಂಗಳಾಂತ್ಯದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರು ತಮ್ಮ ಡೆಬಿಟ್ ಕಾರ್ಡ್ ಬಳಸುವ ಮೂಲಕ ದಂಡ ಪಾವತಿಸಬಹುದಾಗಿದೆ. ಈ ತಿಂಗಳಾಂತ್ಯದಲ್ಲಿ ಈ ಸೌಲಭ್ಯ ಬಳಸಬಹುದಾಗಿದೆ.

ವಾಹನ ಸವಾರರು ದಂಡ ಪಾವತಿಗಾಗಿ 650 ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ ಸಾಧನಗಳ ಪೈಕಿ ಈಗಾಗಲೇ ನಾವು 75 ಸಾಧನಗಳನ್ನು  ಪಡೆದುಕೊಂಡಿವೆ. ಮಾರ್ಚ್ ಅಂತ್ಯದ ವೇಳೆಗೆ ಕಾರ್ಡ್ ಬಳಕೆಗೆ ಅವಕಾಶ ಕಲ್ಪಿಸಲಾಗುವುದು, ಸಂಚಾರಿ ಪೊಲೀಸರು ಈ ಡಿಜಿಟಲ್ ಸಾಧನ ಬಳಸಿ ನಿಯಮ ಉಲ್ಲಂಘಿಸುವವರಿಂದ ದಂಡ ಕಟ್ಟಿಸಿಕೊಳ್ಳಲಿದ್ದಾರೆ ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

ಈ ಡಿಜಿಟಲ್ ಸಾಧನವನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಸಂಚಾರಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಸಂಚಾರಿ ದಂಡ ಪಾವತಿಗೆ ಇದೇ ಮೊದಲ ಬಾರಿಗೆ ನಗದುರಹಿತ  ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ದಂಡ ಪಾವತಿವೇಳೆ ಯಾವುದೇ ತಾಂತ್ರಿಕ ತೊಂದರೆಯಾಗದಂತೆ ಸಿದ್ಧತೆ ನಡೆಸುತ್ತಿದ್ದೇವೆ, ಉಳಿದ ಸಾಧನಗಳನ್ನು ಶೀಘ್ರದಲ್ಲೇ ಪಡೆದುಕೊಳ್ಳುತ್ತೇವೆ ಎಂದು ಹಿತೇಂದ್ರ ಹೇಳಿದ್ದಾರೆ.

ಈ ಹಿಂದೆ ಹಳೇಯ ಪ್ರಕರಣಗಳನ್ನು ಪತ್ತೆ ಹಚ್ಚಲು ಹಾಗೂ ಹೊಸದಾಗಿ ದಂಡ ವಿಧಿಸಲು ಸಂಚಾರಿ ಪೊಲೀಸರು ಬಳಸುತ್ತಿದ್ದ ಹಳೇಯ ಬ್ಲ್ಯಾಕ್ ಬೆರಿ ಸಾಧನಕ್ಕೆ ಬದಲಾಗಿ ಇನ್ನು ಮುಂದೆ ಈ ಡಿಜಿಯಲ್ ಯಂತ್ರಗಳನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಸಾಧನದ ಒಳಗೆ ಪ್ರಿಂಟರ್ ಅಳವಡಿಸಲಾಗಿರುತ್ತದೆ. ಬ್ಲ್ಯಾಕ್ ಬೆರ್ರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ, ಒಂದು ಬಾರಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿದರೇ ಕೂಡಲೇ ಸವಾರರ ಮೊಬೈಲ್ ನಂಬರ್ ಗೆ ಸಂದೇಶ ರವಾನೆಯಾಗುತ್ತದೆ. ಜೊತೆಗೆ ಸಂಚಾರಿ ನಿಯಮ ಉಲ್ಲಂಘನೆಯ ಮಾಹಿತಿ ಒಳಗೊಂಡಿರುತ್ತದೆ.

ಈ ಹೊಸ ವಿಧಾನವನ್ನು ಹಲವು ಸಂಚಾರಿ  ಪೊಲೀಸರು ಸ್ವಾಗತಿಸಿದ್ದಾರೆ. ನೋಟು ನಿಷೇಧದ ನಂತರ ಉಂಟಾಗಿದ್ದ ಹಣದ ಅಭಾವ ಹಾಗೂ ಚಿಲ್ಲರೆ ಸಮಸ್ಯೆಗೆ ಇದರಿಂದ ಮುಕ್ತಿ ದೊರಕಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.ಈ ವಿಧಾನವನ್ನು ಈಗಾಗಲೇ ಮುಂಬಯಿ ಮತ್ತು ಹೈದರಾಬಾದ್ ನಗರಗಳಲ್ಲಿ ಬಳಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com