ಬೆಂಗಳೂರು: ಪೆರೋಲ್ ಮೇಲೆ ಬಂದಿದ್ದ ಕೈದಿ ಮಗನ ಜೊತೆ ಆತ್ಮಹತ್ಯೆ

ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗನ ಜೊತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ...
ಶ್ರೀಧರ್ ಮತ್ತು ವಿಷ್ಣು
ಶ್ರೀಧರ್ ಮತ್ತು ವಿಷ್ಣು
Updated on: 

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗನ ಜೊತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

ಬಾಗಲಗುಂಟೆ ಸಮೀಪದ ಶೆಟ್ಟಿಹಳ್ಳಿಯಲ್ಲಿನ ತಮ್ಮ ಮನೆಯಲ್ಲೇ ಶ್ರೀಧರ್ (38) ಎಂಬುವರು ಮಗ ಶ್ರೀವಿಷ್ಣು (13) ಜತೆ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಧರ್ ಪತ್ನಿ ಸಾವಿತ್ರಿ ಅವರು ತಂದೆ ಜತೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಹಣಕಾಸಿನ ವಿಚಾರಕ್ಕೆ ಜಗಳವಾಗಿ 8 ವರ್ಷಗಳ ಹಿಂದೆ ಅಕ್ಕನ ಗಂಡನನ್ನು ಶ್ರೀಧರ್ ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅವರು, ಮಾರ್ಚ್ 8ರಂದು ಪೆರೋಲ್ ಮೇಲೆ ಹೊರಬಂದಿದ್ದರು.

ಸಾವಿತ್ರಿ ಅವರು ಮಗಳ ಜೊತೆ ಜತೆ ಶನಿವಾರ ಸಂಜೆ ತವರು ಮನೆಗೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೆ ಬರುವುದಾಗಿ ಶ್ರೀಧರ್ ಪತ್ನಿಗೆ ತಿಳಿಸಿದ್ದರು. ಸುಮಾರು ಸಮಯ ಕಳೆದರೂ ಪತಿ–ಮಗ ಬಾರದಿದ್ದಾಗ, ಸಾವಿತ್ರಿ ಪುನಃ ಕರೆ ಮಾಡಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದರಿಂದ ಅನುಮಾನಗೊಂಡ ಅವರು, ತಂದೆಯನ್ನು ಕರೆದುಕೊಂಡು ಮನೆ ಹತ್ತಿರ ಬಂದಿದ್ದಾರೆ. ಎಷ್ಟೇ ಬಾಗಿಲು ಬಡಿದರೂ ಪ್ರತಿಕ್ರಿಯೆ ಸಿಗದಿದ್ದಾಗ, ಸ್ಥಳೀಯರ ಮೂಲಕ ಬಾಗಿಲು ಮುರಿಸಿದ್ದಾರೆ.

ಕೋಣೆಯಲ್ಲಿ ಪತಿ–ಮಗನ ಮೃ ತದೇಹಗಳು ಫ್ಯಾನ್ ನಲ್ಲಿ ನೇತಾಡುತ್ತಿದ್ದವು. ಪತಿಗೆ ಶ್ರೀವಿಷ್ಣು ಎಂದರೇ ಬೆಟ್ಟದಷ್ಟು ಪ್ರೀತಿ. ಮಗ ಕೂಡ ತಂದೆಯನ್ನು ಅಷ್ಟೇ ಇಷ್ಟಪಡುತ್ತಿದ್ದ. ಮಗನ ಜತೆ ಸಮಯ ಕಳೆಯುವುದಕ್ಕಾಗಿಯೇ ಅವರು ಆಗಾಗ್ಗೆ ಪೆರೋಲ್ ಮೇಲೆ ಬರುತ್ತಿದ್ದರು’ ಎಂದು ಸಾವಿತ್ರಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com