
ಬೆಂಗಳೂರು: ಚಾಲಕನೋರ್ವ ಕುಡಿದು ವಾಹನ ಚಲಾಯಿಸಿದ ಎಂಬ ಕಾರಣಕ್ಕೆ ಟ್ರಾವೆಲ್ಸ್ ಮಾಲೀಕನೋರ್ವ ಚಾಲಕನಿಗೆ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಬಾಬು ನೆಲಮಂಗಳ ಎಂಬ ಫೇಸ್ ಬುಕ್ ಖಾತೆದಾರರು ಈ ವಿಡಿಯೋವನ್ನು ನಿನ್ನೆ ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿರುವ ಟ್ರಾವೆಲ್ಸ್ ಮಾಲೀಕ ಯಾರು ಎಂದು ತಿಳಿಸಿಲ್ಲ. ಇನ್ನು ವಿಡಿಯೋದಲ್ಲಿ ಟ್ರಾವೆಲ್ಸ್ ಮಾಲೀಕ ಕುಡಿದ ವಾಹನ ಚಾಲನೆ ಮಾಡಿದ್ದರಿಂದ ಪೊಲೀಸ್ ಕೇಸ್ ದಾಖಲಾದ್ದರಿಂದ ಆಕ್ರೋಶಗೊಂಡು ಚಾಲಕನನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಚಾಲಕ ಹೊಡೆಯಬೇಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಬಿಡದ ಆದ ದೊಣ್ಣೆಯಿಂದ ಭಾರಿಸಿದ್ದಾನೆ. ಅಂತೆಯೇ ವಿಡಿಯೋದಲ್ಲಿ ಆತ ಹೇಳಿಕೊಂಡಿರುವಂತೆ ಆತನ ಟ್ರಾವೆಲ್ಸ್ ಹೆಸರು ಸಿದ್ದೇಶ್ವರ ಟ್ರಾವಲ್ಸ್ ಎಂದು ತಿಳಿದುಬಂದಿದೆ.
ಚಾಲಕ ಕುಡಿದು ವಾಹನ ಚಾಲನೆ ಮಾಡಿದ ಪರಿಣಾಮ ಗ್ರಾಹಕರು ಕಾರು ಚಾಲನೆ ಮಾಡಿಕೊಂಡು ಬಂದಿದ್ದಾರೆ ಎಂದು ಆತ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಂತೆಯೇ 8 ಸಾವಿರ ಹಣ ನೀಡಿ ಇಲ್ಲಿಂದ ಎದ್ದು ಹೋಗುವಂತೆಯೂ ಆತ ಎಚ್ಚರಿಕೆ ವಿಡಿಯೋದಲ್ಲಿ ನೀಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯೂಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ವ್ಯಾಪಕ ಶೇರ್ ಆಗುತ್ತಿದೆ. ಅಂತೆಯೇ ಟ್ರಾವೆಲ್ಸ್ ಮಾಲೀಕನ ವಿರುದ್ಧವೂ ಖಂಡನೆ ವ್ಯಕ್ತವಾಗುತ್ತಿದೆ.
ಆದರೆ ಈ ಘಟನೆ ಎಲ್ಲಿ ಆಗಿದ್ದು, ಯಾವಾಗ ನಡೆದಿದ್ದು ಎಂಬುದರ ಕುರಿತು ಮಾಹಿತಿಗಳು ಲಭ್ಯವಾಗಿಲ್ಲ.
Advertisement