ಪ್ರಸ್ತುತ ಸಿಬಿಎಸ್ಇ ಮತ್ತು ಐಸಿಎಸ್ಇ ಶಿಕ್ಷಣ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ಹಿಡಿತವಿರಲಿಲ್ಲ. ಹೀಗಾಗಿ ಒಂದು ಬಾರಿ ನಿರಾಕ್ಷೇಪಣಾ ಪತ್ರ ಪಡೆದ ಬಳಿಕ ಆ ಶಾಲೆಗಳು ತಮ್ಮಿಷ್ಟಕ್ಕೆ ಬಂದಂತೆ ಕಾರ್ಯನಿರ್ವಹಿಸುತ್ತಿದ್ದವು. ತಿದ್ದುಪಡಿ ವಿಧೇಕದ ಅನ್ವಯ ಸಿಬಿಎಸ್ ಮತ್ತು ಐಸಿಎಸ್ಇ ಶಾಲೆಗಳು ವಸೂಲಿ ಮಾಡುತ್ತಿರುವ ಶುಲ್ಕದ ಮೇಲೆ ನಿಯಂತ್ರಣ, ಶಿಕ್ಷಕರ ಸೇವಾ ಸಂಬಂಧಿ ವಿಚಾರಗಳಲ್ಲಿ ಸರ್ಕಾರದ ಮೇಲ್ವಿಚಾರಣೆ ಮತ್ತು ಇಂತಹ ಶಾಲೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ವಸತಿ ಸಹಿತ ಶಾಲೆಗಳಲ್ಲಿ ಮಕ್ಕಳ ಭದ್ರತೆ ಮತ್ತು ಸುರಕ್ಷತೆ ವಿಚಾರವಾಗಿ ಸರ್ಕಾರದ ಮುಕ್ತ ಪ್ರವೇಶಕ್ಕೆ ಅವಕಾಶ ದೊರಕಲಿದೆ.